ಕೊರೋನಾ ಭೀತಿಯ ನಡುವೆ ಜನ ತತ್ತರಿಸುತ್ತಿರುವಾಗಲೇ ಮತ್ತೆ ಮಹಾರಾಷ್ಟ್ರದ ಜನತೆಗೆ ಅಘಾತವೊಂದು ಎದುರಾಗಿದೆ..ಇಂದು ನಿಸರ್ಗ ಚಂಡಮಾರುತ ಮಹಾರಾಷ್ಟ್ರ -ಗುಜರಾತ್ ಕಡೆ 110 ಕಿ.ಮೀ ಪರ್ ಹಾರ್ ಬೀಸುತ್ತಿದ್ದು ಜನಜೀವನ ಅಸ್ಥವ್ಯಸ್ಥವಾಗಿದೆ. ಭಾರೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಇದರ ಜೊತೆಯಲ್ಲಿಯೇ ಭಾರೀ ಪ್ರಮಾಣದಲ್ಲಿ ಮಳೆ ಕೂಡ ಆಗುತ್ತಿದೆ.ನಿಸರ್ಗ ಚಂಡಮಾರುತದ ಹೊಡೆತಕ್ಕೆ 4 ಜನ ಸಾವನ್ನಪ್ಪಿದ್ದಾರೆ .
ನಿಸರ್ಗ ಚಂಡಮಾರುತದ ಗಾಳಿ ರಭಸಕ್ಕೆ ಮನೆಯ ಮೇಲ್ಛಾವಣಿಗಳು ಹಾರಿ ಬೀಳುತ್ತಿವೆ. ಈ ಹಿನ್ನಲೆ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಕಾರ್ಯಪ್ರವೃತ್ತವಾಗಿದೆ. ನಿಸರ್ಗ ಚಂಡಮಾರುತದಿಂದಾಗಿ ಸಮುದ್ರದ ಅಲೆಗಳ ರಭಸ ಜೋರಾಗಿದ್ದು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.ತಗ್ಗು ಪ್ರದೇಶ , ಅತೀಯಾದ ಗಾಳಿ ಇರೊ ಭಾಗದಲ್ಲಿ 50 ಸಾವಿರ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ.
ಇತ್ತ ಮಹಾರಾಷ್ಟ್ರ ಹಾಗೂ ಗುಜರಾತ್‍ನಲ್ಲಿ ಬೀಸುತ್ತಿರುವ ನಿಸರ್ಗ ಚಂಡಮಾರುತಕ್ಕೆ ಕರಾವಳಿ ಪ್ರದೇಶವು ನಲುಗಿಹೋಗಿದೆ.. ಕರಾವಳಿಯ ಹಲವು ಕಡೆ ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಜೊತೆಗೆ ಕಡಲಅಬ್ಬರ ಜೋರಾಗಿದ್ದು ಜನರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ.