ಹಾಸನ, ನ. 07: ಅನುಮಾನಾಸ್ಪದ ರೀತಿಯಲ್ಲಿ ಎರಡು ಚಿರತೆಗಳು ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಲ್ಲುಂಡಿ ಗ್ರಾಮದಲ್ಲಿ ನಡೆದಿದೆ.
ಎರಡು ಹಾಗೂ ಒಂದು ವರ್ಷದ ಚಿರತೆಗಳು ಮೃತಪಟ್ಟಿವೆ. ಚಿರತೆಗಳು ಔಷಧಿ ಮಿಶ್ರಿತ ಆಹಾರ ಸೇವಿಸಿ ಸಾವಿಗೀಡಾಗಿರಬಹುದು ಎಂದು ಪಶುವೈದ್ಯಾಧಿಕಾರಿಗಳಾದ ಹರೀಶ್ ಹಾಗೂ ವರದರಾಜ್ ಪರಿಶೀಲನೆ ನಂತರ ಶಂಕೆ ವ್ಯಕ್ತಪಡಿಸಿದ್ದಾರೆ.
ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರಣ್ಯಾಧಿಕಾರಿಗಳು ಮೃತ ಚಿರತೆಗಳ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆಗೆ ಮುಂದಾಗಿದ್ದಾರೆ.