vijaya times advertisements
Visit Channel

ಜೀರಿಗೆ, ಮೆಂತ್ಯ, ಓಂಕಾಳು ನಿತ್ಯವೂ ಬಳಸಿ.. ವೇಗವಾಗಿ ತೂಕ ಇಳಿಸಿ

x17-1497682797-weightlossdrink2.pagespeed.ic_.p5xUxCneZa

ಮನೆಯಲ್ಲಿ ಅಡುಗೆಯ ವೇಳೆ ಬಳಕೆ ಮಾಡುವ ಅನೇಕ ವಸ್ತುಗಳು ಅಃಆರಕ್ಕೆ ರುಚಿಯನ್ನು ಹೆಚ್ಚಿಸುವದರ ಜೊತೆಗೆ ಆರೋಗ್ಯವನ್ನೂ ವೃದ್ಧಿಸುತ್ತದೆ. ಅದ್ರಲ್ಲೂ ಮೆಂತ್ಯೆ, ಓಂಕಾಳು, ಜೀರಿಗೆಯಂತಹ ವಸ್ತುಗಳಂತೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಹೌದು..ಬಿಸಿ ನೀರಿನಲ್ಲಿ ಮೆಂತ್ಯೆ, ಓಂಕಾಳು, ಜೀರಿಗೆ ಪುಡಿ ಬೆರೆಸಿ ಕುಡಿದರೆ 3 ತಿಂಗಳಲ್ಲಿ ದೇಹದಲ್ಲಿನ ಕೆಟ್ಟ ಕೊಬ್ಬೆಲ್ಲಾ ಕರಗಿ ತೂಕ ಕಡಿಮೆಯಾಗುತ್ತವೆ.. ಕೇವಲ ತೂಕವಷ್ಟೇ ಅಲ್ಲ, ಕೂದಲ ಬೆಳವಣಿಗೆ, ಹೃದಯ ಸಂಬಂಧಿ ಕಾಯಿಲೆಗಳು, ಮಲಬದ್ಧತೆ ಇನ್ನೂ ಅನೇಕ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿ ಈ ಪುಡಿ ಕೆಲಸ ಮಾಡುತ್ತದೆ. ಆ ಪುಡಿಯನ್ನು ಹೇಗೆ ತಯಾರಿಸಿಕೊಳ್ಳಬೇಕು, ಹೇಗೆ ಬಳಸಬೇಕು, ಅದರಿಂದ ಆಗುವ ಇತರೆ ಉಪಯೋಗಗಳು ಏನೆಲ್ಲಾ ಗೊತ್ತಾ..?

ಬೇಕಾದ ಪದಾರ್ಥಗಳು: 250 ಗ್ರಾಂ ಮೆಂತ್ಯೆ, 100 ಗ್ರಾಂ ಓಂಕಾಳು,0 ಗ್ರಾಂ ಜೀರಿಗೆ

ತಯಾರಿಸುವ ವಿಧಾನ: ಮೊದಲು 3 ಪದಾರ್ಥಗಳನ್ನು ಬೇರೆಬೇರೆ ಹೆಂಚಿನ ಮೇಲೆ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಮೆಂತ್ಯೆ, ಓಂಕಾಳು, ಕಪ್ಪು ಜೀರಿಗೆ ಬೆರೆಸಿ ಪುಡಿ ಮಾಡಿಕೊಳ್ಳಬೇಕು. ಆ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿಡಬೇಕು.

ಬಳಸುವುದು ಹೇಗೆ?

ನಿತ್ಯ ರಾತ್ರಿ ಊಟದ ಬಳಿಕ 1 ಗ್ಲಾಸ್ ಬಿಸಿ ನೀರಿನಲ್ಲಿ 1 ಸ್ಪೂನ್ ಪುಡಿಯನ್ನು ಬೆರೆಸಿ ಕುಡಿಯಬೇಕು. ಕುಡಿದ ಬಳಿಕ ಯಾವುದೇ ಆಹಾರ ತೆಗೆದುಕೊಳ್ಳಬಾರದು. ನಿತ್ಯ ಈ ಪುಡಿಯನ್ನು ಬಳಸುವುದರಿಂದ ದೇಹದಲ್ಲಿ ಸಂಗ್ರಹವಾಗಿರುವ ವಿಷ ಪದಾರ್ಥಗಳು ಮಲ, ಮೂತ್ರ, ಬೆವರಿನ ಮೂಲಕ ಹೊರಹೋಗುತ್ತವೆ. ನಿಯಮಿತವಾಗಿ 40-45 ದಿನ ಬಳಸಿದರೆ ತುಂಬಾ ಪ್ರಯೋಜನಕಾರಿಯಾಗುತ್ತದೆ. 3 ತಿಂಗಳು ಬಳಸಿದರೆ ನಿಮ್ಮ ಆರೋಗ್ಯಕ್ಕೆ ಸರಿಸಾಟಿ ಇರಲ್ಲ.

ಈ ಪುಡಿಯನ್ನು ಬಳಸಿದ ಮೇಲೆ ದೇಹದಲ್ಲಿನ ಅಧಿಕ ಕೊಬ್ಬು ಕರಗಿಹೋಗುತ್ತದೆ. ರಕ್ತ ಶುದ್ಧಿಯಾಗುತ್ತದೆ. ದೇಹದಲ್ಲಿ ಉತ್ತಮವಾದ ರಕ್ತ ಪ್ರವಹಿಸುತ್ತದೆ. ದೇಹದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತದೆ. ಯೌವನದಿಂದ ಇರುತ್ತೀರ. ದೇಹ ದೃಢವಾಗಿ, ಚುರುಗಾಗಿ, ಹೊಳಪಿನಿಂದ ಕೂಡಿರುತ್ತದೆ.

ಈ ಪುಡಿಯಿಂದ ಆಗುವ ಇತರೆ ಪ್ರಯೋಜನಗಳು:

ಕೀಲು, ಮೊಣಕಾಲು ನೋವು ಕಡಿಮೆಯಾಗುತ್ತದೆ. ಮೂಳೆಗಳು ಬಲಗೊಳ್ಳುತ್ತವೆ.ಕಣ್ಣಿನ ದೃಷ್ಟಿ ಚುರುಕಾಗುತ್ತದೆ ಜೊತೆಗೆ ವಸಡುಗಳು ದೃಢವಾಗುತ್ತವೆ, ಆರೋಗ್ಯವಾಗಿ ಬದಲಾಗುತ್ತಾರೆ. ಈ ಹಿಂದೆ ತೆಗೆದುಕೊಂಡಿದ್ದ ಇಂಗ್ಲಿಷ್ ಮೆಡಿಸಿನ್ ಸೈಡ್ ಎಫೆಕ್ಟ್ಸ್‌ನ್ನು ಇದು ಕ್ಲಿಯರ್ ಮಾಡುತ್ತದೆ. ಕೂದಲ ಬೆಳವಣಿಗೆಯನ್ನು ಇದು ಉತ್ತಮ ಪಡಿಸುತ್ತದೆ. ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತದೆ. ಮೋಷನ್ ಸುಲಭವಾಗಿ ಆಗುತ್ತದೆ. ರಕ್ತ ಸಂಚಲನೆ ಉತ್ತಮಗೊಳ್ಳುತ್ತದೆ. ಹೃದಯದ ಕೆಲಸ ಸುಧಾರಿಸುತ್ತದೆ.

ದೀರ್ಘಕಾಲದಿಂದ ಕೆಮ್ಮಿನಿಂದ ಬಳಲುತ್ತಿರುವವರಿಗೆ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದನ್ನು ನಿತ್ಯ ರಾತ್ರಿ ಹೊತ್ತು ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ. ಮಿದುಳು ಚುರುಕಾಗುತ್ತದೆ. ಶ್ರವಣ ಸಾಮರ್ಥ್ಯ ಬೆಳೆಯುತ್ತದೆ. ನಿತ್ಯ ಕೆಲಸಗಳಲ್ಲಿ ಚುರುಕಾಗಿ ಪಾಲ್ಗೊಳ್ಳಬಹುದು. ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ಇದರ ಫಲಿತಾಂಶಗಳನ್ನು ಗಮನಿಸಿದವರು ಈ ಪುಡಿಯನ್ನು ಮತ್ತೆ ಬಳಸಬೇಕೆಂದರೆ ಮೂರು ತಿಂಗಳಿಗೊಮ್ಮೆ ಹದಿನೈದು ದಿನ ಗ್ಯಾಪ್ ಬಿಟ್ಟು ಮತ್ತೆ ಕುಡಿಯುವುದನ್ನು ಶುರು ಮಾಡಬೇಕು.                                    

Latest News

ರಾಜಕೀಯ

“ಸಂಸತ್ತಿನಲ್ಲಿ ನನಗೆ ಕಹಿ ಅನುಭವಗಳಾಗಿವೆ” :  ಎಚ್.ಡಿ.ದೇವೇಗೌಡರ

ಆಯಾ ಸದನಗಳನ್ನು ಉದ್ದೇಶಿಸಿ ಮಾತನಾಡಲು ಸಂಸದರಿಗೆ ನೀಡಿದ ಸಮಯವನ್ನು ಮರುಪರಿಶೀಲಿಸಬೇಕು” ಎಂದು ರಾಜ್ಯಸಭೆ ಮತ್ತು ಲೋಕಸಭೆಯ ಸ್ಪೀಕರ್‌ಗಳನ್ನು ದೇವೇಗೌಡರು  ಒತ್ತಾಯಿಸಿದರು.

ದೇಶ-ವಿದೇಶ

BJP ಹಾರ್ದಿಕ್‌ಪಟೇಲ್‌ಗೆ ಜಯ, ಕಾಂಗ್ರೆಸ್‌ನ  ಜಿಗ್ನೇಶ್‌ಮೆವಾನಿಗೆ ಸೋಲು ; BJP ಪ್ರಚಂಡ ಗೆಲುವಿಗೆ ಕಾರಣ?

ಬಾರಿಯ ವಿಧಾನಸಭಾ ಚುನಾವಣೆಯಲ್ಲಿ  ಒಟ್ಟಾರೆಯಾಗಿ ಕಾಂಗ್ರೆಸ್‌ ಪಕ್ಷ ಹೀನಾಯ ಸೋಲು ಕಂಡಿದೆ. ಬಿಜೆಪಿಯ ಪ್ರಚಂಡ ಗೆಲುವಿಗೆ ಪ್ರಮುಖ ಕಾರಣ

ದೇಶ-ವಿದೇಶ

ಗುಜರಾತ್‌ನಲ್ಲಿ ದಾಖಲೆಯತ್ತ ಬಿಜೆಪಿ, ಹಿಮಾಚಲದಲ್ಲಿ ಬಿಜೆಪಿ – ಕಾಂಗ್ರೆಸ್‌ ನಡುವೆ ನೇರ ಹಣಾಹಣಿ

ಆಡಳಿತಾರೂಢ ಪಕ್ಷವಾಗಿದ್ದ ಬಿಜೆಪಿಯು ಕೇವಲ 25 ಸ್ಥಾನಗಳಿಸಿ 2ನೇ ಸ್ಥಾನಕ್ಕೆ ಕುಸಿದಿದೆ. ಆದರು ಅಧಿಕಾರದ ಗದ್ದಿಗೇರಲು ಆಡಳಿತಾರೂಢ ಬಿಜೆಪಿ ಆಪರೇಷನ್ ಕಮಲಕ್ಕೆ ಭರದಸಿದ್ಧತೆ ನಡೆಸುತಿದೆ.