ಮೈಸೂರು: ತರಕಾರಿ ಸಾಗಿಸುವ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಅಂತಾರಾಜ್ಯ ಆರೋಪಿಗಳನ್ನು ಮೈಸೂರು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಮಹಮ್ಮದ್ ಶಾಫಿ, ಸಲೀಂ, ಪಫಿ, ಇಬ್ರಾಹಿಂ ಕುಟ್ಟಿ ಬಂಧಿತರಾಗಿದ್ದು, ಇವರಿಂದ 86 ಕೆಜಿ 300 ಗ್ರಾಂ ಗಾಂಜಾ ಹಾಗೂ ವಾಹನ ವಶಕ್ಕೆ ಪಡೆಯಲಾಗಿದೆ. ಗಾಂಜಾ ಸಾಗಾಣೆ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಪೊಲೀಸರು, ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ತರಕಾರಿ ಸಾಗಿಸುವ ವಾಹನದಲ್ಲಿ ಮೇಲೆ ಟೊಮೆಟೋ ಇರಿಸಿ, ಒಳಗೆ ಗಾಂಜಾ ಇಟ್ಟು ಸಾಗಿಸುತ್ತಿದ್ದರು. ಟೊಮ್ಯಾಟೋ ಕ್ರೇಟ್ಗಳ ಒಳಗೆ ಗಾಂಜಾ ತುಂಬಿಕೊಂಡು ಹೋಗುತ್ತಿದ್ದ ಆಸಾಮಿಗಳು. ಆಂಧ್ರಪ್ರದೇಶದಿಂದ ಕರ್ನಾಟಕದ ಮೂಲಕ ಕೇರಳ ರಾಜ್ಯಕ್ಕೆ ಗಾಂಜಾ ಸಾಗಿಸುತ್ತಿದ್ದರು ಎಂದು ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು.