ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ನಾಮ ನಿರ್ದೇಶನಗೊಂಡಿದೆ ಎಂದು ವರದಿಯಾಗಿದೆ.
2021ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಅವರು ನಾಮ ನಿರ್ದೇಶನಗೊಂಡಿದ್ದು ನಾರ್ವೆ ದೇಶದ ಸಂಸದ ಕ್ರಿಶ್ಚಿಯನ್ ಟೈಬ್ರಿಂಗ್ ಜೆಡ್ಡೆ ಅವರು, ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ನಾಮ ನಿರ್ದೇಶನ ಮಾಡಿದ್ದು, ಇಸ್ರೇಲ್ ಹಾಗೂ ಯುಎಇ ನಡುವೆ ಜಾಗತಿಕವಾಗಿ ನಡೆಯಲಿದ್ದ ಸಂಘರ್ಷಗಳನ್ನು ತಡೆಯುವಲ್ಲಿ ಟ್ರಂಪ್, ಮಹತ್ತರವಾದ ಕೊಡುಗೆ ನೀಡಿದ್ದಾರೆ. ಈ ಕಾರಣದಿಂದಾಗಿ ಅವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿರುವುದಾಗಿ ಜೆಡ್ಡೆ ತಿಳಿಸಿದ್ದಾರೆ.
ಅಲ್ಲದೇ ಈ ಹಿಂದೆ 2019ರ ನೊಬೆಲ್ ಶಾಂತಿ ಪ್ರಶಸ್ತಿಗೆ ಸಹ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಟೈಬ್ರಿಂಗ್ ಜೆಡ್ಡೆ ನಾಮ ನಿರ್ದೇಶನ ಮಾಡಿದ್ದರು. ನಾರ್ಥ್ ಕೊರಿಯಾ ಹಾಗೂ ಸಿರಿಯಾ ನಡುವಿನ ಸಮಸ್ಯೆ ಬಗೆಹರಿಸುವಲ್ಲಿ ಟ್ರಂಪ್ ಕೈಗೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಟ್ರಂಪ್ ಹೆಸರನ್ನು ನಾಮ ನಿರ್ದೇಶನ ಮಾಡಿದ್ದರು ಎಂದು ವರದಿಯಾಗಿದೆ.