ಟ್ವಿಟರ್ ಸಂಸ್ಥೆಗೆ ಸೈಬರ್ ಸೆಕ್ಯೂರಿಟಿ ನೋಡಲ್ ಏಜೆನ್ಸಿಯಿಂದ ನೋಟಿಸ್

ನವದೆಹಲಿ: ಉನ್ನತ ಪ್ರೊಫೈಲನ್ನು ಗುರಿಯಾಗಿಸಿಕೊಂಡು ಇತ್ತೀಚಿಗೆ ಆದ ಜಾಗತಿಕ ಹ್ಯಾಕ್‍ನ ಪೂರ್ಣ ಮಾಹಿತಿ ನೀಡುವಂತೆ ಸೂಚಿಸಿ ಭಾರತದ ಸೈಬರ್ ಸೆಕ್ಯೂರಿಟಿ ನೋಡಲ್ ಏಜೆನ್ಸಿ ಸಿಇಆರ್‍ ಟಿ, ಟ್ವಿಟರ್ ಸಂಸ್ಥೆಗೆ ನೋಟಿಸ್ ನೀಡಿದೆ.

ಜಾಗತಿಕ ಹ್ಯಾಕ್‍ನಿಂದಾಗಿ ಅಪಾರ ಸಂಖ್ಯೆಯ ಭಾರತೀಯ ಬಳಕೆದಾರರು ಹಾಗೂ ಅವರ ಡಾಟಾ ಮೇಲೆ ಪರಿಣಾಮ ಬೀರಿದ್ದು, ಅದರ ಸಂಪೂರ್ಣ ಮಾಹಿತಿ ನೀಡುವಂತೆ ಕೇಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ದುರುದ್ದೇಶಪೂರಿತ ಟ್ವೀಟ್‌ಗಳು ಮತ್ತು ಲಿಂಕ್‌ಗಳಿಗೆ ಭೇಟಿ ನೀಡಿದ ಭಾರತದ ಬಳಕೆದಾರರ ಸಂಖ್ಯೆ ಮತ್ತು ಒಂದು ವೇಳೆ ಪರಿಣಾಮ
ಬೀರಬಹುದಾದ ಬಳಕೆದಾರರ ಟ್ವಿಟರ್ ಖಾತೆ ಬಗ್ಗೆ ಮಾಹಿತಿ ನೀಡಲಾಗಿತ್ತೆ ಎಂಬ ಬಗ್ಗೆ ಮಾಹಿತಿ ನೀಡುವಂತೆಯೂ ಸಿಇಆರ್ಟಿ, ಟ್ವಿಟರ್ ಸಂಸ್ಥೆಯನ್ನು ಕೇಳಿದೆ ಎಂದು ತಿಳಿದುಬಂದಿದೆ.

ದಾಳಿಕೋರರ ಕಾರ್ಯವಿಧಾನ ಹಾಗೂ ಹ್ಯಾಕಿಂಗ್‍ನಿಂದ ಆದ ಪರಿಣಾಮದ ಬಗ್ಗೆ ಕೈಗೊಂಡ ಕಾನೂನು ಕ್ರಮದ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡುವಂತೆ ಸರ್ಕಾರ, ಟ್ವೀಟರ್ ಸಂಸ್ಥೆಯನ್ನು ಒತ್ತಾಯಿಸಿದೆ. ಆದರೆ ಇದಕ್ಕೆ ಟ್ವಿಟರ್ ಸಂಸ್ಥೆಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

Exit mobile version