ದೇಶದಲ್ಲಿ ದಾಖಲೆಯ ಮಳೆ

ದೇಶದಲ್ಲಿ ಮುಂಗಾರು ಅವಧಿಯಲ್ಲಿ ದೇಶದಲ್ಲಿ 957.6 ಮಿ.ಮೀ ಮಳೆಯಾಗಿದ್ದು, ಮಳೆ ಪ್ರಮಾಣ ಹಿಂದಿನ ವರ್ಷಗಳಿಗಿಂತ ಶೇ.9 ಹೆಚ್ಚುವರಿಯಾಗಿದೆ. ಕಳೆದ ನಾಲ್ಕು ತಿಂಗಳ (ಜೂ.1ರಿಂದ ಸೆಪ್ಟೆಂಬರ್ 30) ಸುದೀರ್ಘ ಮಳೆಗಾಲ ಸೆಪ್ಟೆಂಬರ್ 30ಕ್ಕೆ ಮುಕ್ತಾಯಗೊಂಡಿದೆ. ಈ ವೇಳೆ ದೇಶದ ಅಂದಾಜು ಶೇ.85 ಪ್ರದೇಶಗಳಲ್ಲಿ ಸಾಮಾನ್ಯ ಅಥವಾ ಅದಕ್ಕಿಂತ ಹೆಚ್ಚಿನ ಮಳೆಯಾಗಿದೆ. ಇದರಲ್ಲಿ ಸಿಕ್ಕಿಂನಲ್ಲಿ ಶೇ.60 ಹೆಚ್ಚುವರಿ ಮಳೆಯಾಗಿರುವ ರಾಜ್ಯವಾಗಿದ್ದು, ಮಳೆಯ ಕೊರತೆ ಎದುರಿಸಿದ ರಾಜ್ಯಗಳ ಸಾಲಿನಲ್ಲಿ ಲಡಾಕ್ ಅಗ್ರಸ್ಥಾನದಲ್ಲಿದೆ.
ಕಳೆದ 24 ಗಂಟೆಗಳಲ್ಲಿ ಗುಜರಾತ್ನ ರಾಜ್ಕೋಟ್ನಲ್ಲಿ 70 ಮಿ.ಮೀ ಮಳೆಯಾಗಿದ್ದು, ದಕ್ಷಿಣ ಹಾಗೂ ಮಧ್ಯ ಭಾರತದ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ದೇಶದಲ್ಲಿ ಉತ್ತಮ ಮಳೆಯಾಗಿರುವ 10 ಸ್ಥಳಗಳ ಪಟ್ಟಿ ಇಂತಿದ್ದು, 70 ಮಿ.ಮೀ ಮಳೆಯಾಗಿರುವ ಗುಜರಾತ್‌ನ ರಾಜ್ಕೋಟ್ ಅಗ್ರಸ್ಥಾನ ಪಡೆದಿದ್ದರೆ, 10ನೇ ಸ್ಥಾನದಲ್ಲಿರುವ ರಾಜಸ್ಥಾನದ ಜೋದ್ಪುರ್‌ನಲ್ಲಿ 29 ಮಿ.ಮೀ ಮಳೆಯಾಗಿದೆ. ಕರ್ನಾಕಟದ ಬೆಂಗಳೂರಿನಲ್ಲಿ 40 ಮಿ.ಮೀ ಹಾಗೂ ಮೈಸೂರಿನಲ್ಲಿ 35 ಮಿ.ಮೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Exit mobile version