ಬೆಂಗಳೂರು,ಸೆ.09: ತಾನು ಡಾಕ್ಟರ್ ಆಗಬೇಕು, ಇಂಜಿನಿಯರ್ ಆಗಬೇಕು, ಸಮಾಜಸೇವಕನಾಗಬೇಕು..ಹೀಗೆ ವರ್ತಮಾನದಲ್ಲೇ ಭವಿಷ್ಯದ ಕನಸು ಕಾಣುವ ಮಕ್ಕಳು ಹಲವರು..ಹೀಗೆ ತಾನೊಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಬೇಕೆಂಬ ಐವರು ಮಕ್ಕಳ ಕನಸನ್ನು ಬೆಂಗಳೂರು ನಗರ ಪೊಲೀಸ್ ಇಲಾಖೆ ಈಡೇರಿಸಿದೆ. ಹೌದು.. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಐವರು ಮಕ್ಕಳ ಕನಸನ್ನು ಪೊಲೀಸ್ ಇಲಾಖೆ ನನಸು ಮಾಡಿದೆ. ಒಂದು ದಿನದ ಮಟ್ಟಿಗಾದರೂ ಈ ಐವರು ಮಕ್ಕಳು ಖಾಕಿ ತೊಟ್ಟು ಪೊಲೀಸ್ ಆಯುಕ್ತರಾಗಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವಕಾಶ ನೀಡಿದರು. ಇಂತಹ ಉತ್ತಮ ಕೆಲಸದಲ್ಲಿ ಮೇಕ್ ಎ ವಿಶ್ ಫೌಂಡೇಶನ್ ಜೊತೆಗೆ ಪೊಲೀಸ್ ಇಲಾಖೆ ಸಾಥ್ ನೀಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.