download app

FOLLOW US ON >

Tuesday, January 25, 2022
English English Kannada Kannada

ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸ್ಫರ್ಧಿ ಸಮನ್ವಿ , 6 ವರ್ಷದ ಬಾಲಕಿ ರಸ್ತೆ ಅಪಘಾತದಲ್ಲಿ ನಿಧನ.

ಈ ಕಾರ್ಯಕ್ರಮಕ್ಕೆ 6 ವರ್ಷದ  ಬಾಲಕಿ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ದು ಅವರ ಮೊಮ್ಮಗಳು ಮತ್ತು ಈ ರಿಯಾಲಿಟಿ ಶೋಗೆ ಅವರ ತಾಯಿ ಅಮೃತಾ ಜತೆ ಬಂದಿದ್ದರು.
Childactor

‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮದ ವೀಕ್ಷಕರಿಗೆ ಮನ ಸೋಲೋ ವಿಚಾರ. ಈ ಶೋನಲ್ಲಿ ಜನಪ್ರಿಯ ಕಿರುತೆರೆಯ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಭಾಗವಹಿಸುತ್ತಿದ್ದರು. ಈ ಶೋ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭಗೊಂಡಿದೆ .ಹಾಗೂ ಖ್ಯಾತ ನಿರೂಪಕರಾದ ಸೃಜನ್ ಲೋಕೇಶ್ , ಮತ್ತು ನಟಿಯರಾದ ಅನುಪ್ರಭಾಕರ್ , ತಾರಾ ಅನುರಾಧಾ ಅವರು ಜಡ್ಜ್ ಅಗಿದ್ದರು. ಈ ಕಾರ್ಯಕ್ರಮಕ್ಕೆ 6 ವರ್ಷದ  ಬಾಲಕಿ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಸಮನ್ವಿ ಖ್ಯಾತ ಹರಿಕಥೆ ದಾಸರಾದ ಗುರುರಾಜ ನಾಯ್ದು ಅವರ ಮೊಮ್ಮಗಳು ಮತ್ತು ಈ ರಿಯಾಲಿಟಿ ಶೋಗೆ ಅವರ ತಾಯಿ ಅಮೃತಾ ಜತೆ ಬಂದಿದ್ದರು. ಆದರೆ ನಿನ್ನೆ ಆದ ರಸ್ತೆ ಅಪಘಾತದಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ. ಇದು ಸಮನ್ವಿ ಅಭಿಮಾನಿಗಳಿಗೆ  ಬಹಳ ನೋವು ತಂದಿದೆ. ನಿನ್ನೆ ಬೆಂಗಳೂರು ವಾಜರಹಳ್ಳಿಯಲ್ಲಿ ಸ್ಕೂಟರ್ ನಲ್ಲಿ ಸಮನ್ವಿ ಹಾಗು ಅವರ ತಾಯಿ ತೆರಳುತ್ತಿದ್ದರು ,ಆ ವೇಳೆ ಸ್ಕೊಟರ್‌ಗೆ ಹಿಂದಿನಿಂದ ಲಾರಿ ಹೊಡೆದಿದೆ. ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ಧು ಅವರ ತಾಯಿ ಅಮೃತ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಕೆ.ಎಸ್. ಲೇಜೌಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದಾರೆ. ‘ನನಗೆ ಅಮ್ಮ ಎಂದರೆ ತುಂಬಾನೇ ಅಚ್ಚುಮೆಚ್ಚು. ನಾನು ಅವಳನ್ನು ಜಾಸ್ತಿ ಪ್ರೀತಿ ಮಾಡುತ್ತೇನೆ. ಪಾರ್ಟಿಗೆ ಹೋಗ್ತಾರೆ. ಅಪ್ಪನ ಜತೆ ಹಣ ಶೇರ್ ಮಾಡ್ತಾರೆ. ಈ ಕಾರಣಕ್ಕೆ ನನಗೆ ಅವಳು ಹೆಚ್ಚು ಇಷ್ಟ’ ಎಂದು ಶೋಗೆ ಬಂದಾಗ ಹೇಳಿಕೊಂಡಿದ್ದಳು. ಆದರೆ ಈಗ ಉಜ್ವಲ ಭವಿಷ್ಯ ಕಾಣಬೇಕಿದ್ದ ಆ 6 ವರ್ಷದ ಬಾಲಕಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ಬಹಳ ದುಃಖದ ಸಂಗತಿ

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article