vijaya times advertisements
Visit Channel

ನಿಮ್ಮ ಭವಿಷ್ಯ ನಿಮ್ಮೆದುರು..

zodiac-signs2-12-1473655427-02-1506931582

ಅಗಸ್ಟ್ 16, 2019, ಶುಕ್ರವಾರ

ಮೇಷ: ನಿಮ್ಮ ಬಗ್ಗೆ ನಿಮಗೆ ನಂಬಿಕೆಯಿರಲಿ. ಸರಳ ಜೀವನದ ಮೂಲಕ ಎಲ್ಲರಿಗೆ ಆದರ್ಶಪ್ರಿಯರಾಗುವಿರಿ. ನಿಮ್ಮ ನಾಯಕತ್ವದ ಗುಣವೇ ಪರರನ್ನು ನಿಮ್ಮತ್ತ ಸೆಳೆಯುವುದು. ಮಕ್ಕಳಿಂದ ಶುಭವಾರ್ತೆ.. ಕೆಮ್ಮು ನೆಗಡಿಯಂತಹ ಆರೋಗ್ಯ ಸಮಸ್ಯೆ..ದುರ್ಗಾ ಮಾತೆಯ ಆರಾಧನೆ ಉತ್ತಮ. ಅದೃಷ್ಟ ಸಂಖ್ಯೆ: 2
ವೃಷಭ: ಹಣಕಾಸಿನ ಕೊರತೆಗೆಗಾಗಿ ಒಂಟಿಯಾಗಿ ಹೋರಾಟ ಬೇಕಿಲ್ಲ. ಬಾಳಸಂಗಾತಿಯ ನೆರವು ಪಡೆಯಿರಿ. ನಿಮ್ಮ ಪ್ರತಿಭೆಯ ಅನಾವರಣಕ್ಕಿದು ಸೂಕ್ತ ಕಾಲ. ವಿದ್ಯಾಭ್ಯಾಸ ರಂಗದಲ್ಲಿ ಮಕ್ಕಳ ಉನ್ನತಿ. ಅದೃಷ್ಟ ಸಂಖ್ಯೆ: 1
ಮಿಥುನ: ಗೆಳೆಯನ ಕಷ್ಟಕಾಲಕ್ಕೆ ಸ್ಪಂದಿಸಿ, ನೆರವಿಗೆ ಹೋಗಿ. ಮುಂದೆ ಆತನಿಂದಲೇ ನಿಮಗೆ ಸಹಾಯವಾಗಲಿದೆ. ವ್ಯಾಜ್ಯ ವಿಚಾರದಲ್ಲಿ ಸೋತು ಗೆಲ್ಲುವಿರಿ. ಮುಂದಿನ ದಾರಿ ಯಶಸ್ಸಿನ ಕಡೆಗೆ..ಯಶಸ್ಸಿಗಾಗಿ ಹಣ ವ್ಯಯಿಸಬೇಕಿದೆ. ಅದೃಷ್ಟ ಸಂಖ್ಯೆ: 6
ಕಟಕ: ವ್ಯಾಪಾರದಲ್ಲಿ ಅನವಶ್ಯಕ ಹೂಡಿಕೆಯಿಂದ ನಷ್ಟ ಸಾಧ್ಯತೆ. ಜನ್ಮಶನಿಯಿಂದ ಬಿಡುಗಡೆ ಹೊಂದಿದರೂ ಸಾಡೇ ಸಾತ್ ಶನಿಯ ಕಾಟವಿದ್ದೇ ಇರುತ್ತದೆ. ಹಾಗಾಗಿ ಭಾರೀ ಯೋಚನೆಗಳೀಗೆ ತಡೆ ಹಾಕಿ, ಹಣ ಉಳಿತಾಯವೂ ಕಷ್ಟ ಸಾಧ್ಯ. ಅದೃಷ್ಟ ಸಂಖ್ಯೆ: 4
ಸಿಂಹ: ಅನ್ಯರೊಂದಿಗೆ ನಿಮ್ಮನ್ನು ಹೋಲಿಸಿ ಬೇಸರಗೊಳ್ಳದಿರಿ. ನಿಮ್ಮ ವ್ಯಕ್ತಿತ್ವ ಅನ್ಯರನ್ನು ಆಕರ್ಷಿಸಲಿದೆ. ಹಣಕಾಸಿನ ಸ್ಥಿತಿ ಸಾಮಾನ್ಯವಿರಲಿದೆ. ಅಗತ್ಯಕ್ಕಿಂತ ಹೆಚ್ಚಿನ ಖರ್ಚು ಸಲ್ಲದು. ಶಕ್ತಿದೇವಿಯನ್ನು ಆರಾಧಿಸಿದರೆ ಉತ್ತಮ. ಅದೃಷ್ಟ ಸಂಖ್ಯೆ: 8
ಕನ್ಯಾ: ಹಣಕಾಸಿನ ಕೊರತೆಯಾದರೂ ಕುಟುಂಬ ಇಲ್ಲವೇ ಸ್ನೇಹಿತರ ನೆರವು ಲಭ್ಯವಾಗಲಿದೆ. ದೇವರ ಕೃಪೆಯಿಂದ ಎಲ್ಲವೂ ಸಾಧ್ಯ. ವಿಷ್ಣು ಸಹಸ್ರನಾಮ ಪಠಿಸಿ..ಅದೃಷ್ಟ ಸಂಖ್ಯೆ: 5
ತುಲಾ: ನಿಮ್ಮ ಯಶಸ್ಸಿನಲ್ಲೂ ತಪ್ಪು ಹುಡುಕುವವರಿದ್ದಾರೆ. ಹೊಗಳುವಿಕೆ ಹಾಗೂ ತೆಗಳುವಿಕೆಯನ್ನು ಸಮಾನವಾಗಿ ಸ್ವೀಕರಿಸಿ. ಹಲವು ದಿನಗಳ ಸಮಸ್ಯೆ ಪರಿಹಾರವಾಗಲಿದೆ. ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಅದೃಷ್ಟ ಸಂಖ್ಯೆ: 4
ವೃಶ್ಚಿಕ: ನಿಮ್ಮ ಮಾತು ಅನ್ಯರಿಗೆ ಘಾಸಿಯಾದೀತು ಜೋಕೆ.. ಇದರಿಂದ ಕಲಹ ಸಾಧ್ಯತೆ ಹೆಚ್ಚು. ತಾಳ್ಮೆ ಉತ್ತಮ. ದಿಢೀರ್ ಪ್ರವಾಸ ಸಾಧ್ಯತೆ. ಇದರಿಂದ ಜ್ಞಾನಾರ್ಜನೆ ಸಾಧ್ಯ. ಹಣಕಾಸು ಸ್ಥಿತಿ ಉತ್ತಮವಾಗಲಿದೆ. ಅದೃಷ್ಟ ಸಂಖ್ಯೆ: 2
ಧನುಸ್ಸು: ಅನವಶ್ಯಕ ಖರ್ಚು, ಬರಬೇಕಾದ ಹಣ ಬರುವುದಿಲ್ಲ. ಮಕ್ಕಳಿಗೆ ತಿಳಿಸಬೇಕಿರುವ ಮಹತ್ತರದ ವಿಚಾರ ತಿಳಿಸಲು ಸೂಕ್ತ ಸಮಯ. ಮಕ್ಕಳಿಗೆ ಜವಾಬ್ದಾರಿ ತಿಳಿಸಿ. ಅದೃಷ್ಟ ಸಂಖ್ಯೆ: 6
ಮಕರ: ಏನೋ ಸಂಭವಿಸುವುದೆಂಬ ಚಿಂತೆ ಬೇಕಿಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಅಜೀರ್ಣ ಅಥವಾ ವಾಯುಪ್ರಕೋಪದ ತೊಂದರೆ ಎದುರಾಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಅದೃಷ್ಟ ಸಂಖ್ಯೆ: 3
ಕುಂಭ: ಕುಟುಂಬ ಸಮಸ್ಯೆ ಎದುರಾಗಲಿದೆ. ಮಧ್ಯವರ್ತಿಯಾಗಿ ಹಣಕಾಸಿನ ವಿಚಾರಕ್ಕೆ ಹೋಗದಿರುವುದು ಸೂಕ್ತ. ವ್ಯಾಪಾರದಲ್ಲೂ ಮಧ್ಯವರ್ತಿಗಳಿಂದ ದೂರವಿರಿ. ನಿತ್ಯವೂ ವಿಷ್ಣು ಸಹಸ್ರನಾಮ ಪಠಣ ಉತ್ತಮ. ಅದೃಷ್ಟ ಸಂಖ್ಯೆ: 2
ಮೀನ: ನಿಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯದಿರಿ. ನಿಮ್ಮ ಇಚ್ಛೆ ಪೂರ್ಣವಾಗಲಿದೆ. ನಿಮ್ಮ ಮನಸ್ಸು ಹಕ್ಕಿಯಂತೆ ಹಾರಾಡುವ ಸಮಯ. ನೂತನ ಕೆಲಸ ಮಾಡಲು ಉತ್ಸುಕರಾಗುವಿರಿ.

Latest News

ಪ್ರಮುಖ ಸುದ್ದಿ

ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಇಂದು ಮತ ಎಣಿಕೆ ಆರಂಭ

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲೋ ಪ್ರಕಾರ ಬಿಜೆಪಿ 69 ರಿಂದ 91 ವಾರ್ಡ್ ಗಳಲ್ಲಿ ಗೆಲುವು ಸಾಧ್ಯತೆ ಹಾಗೂ ಕಾಂಗ್ರೆಸ್ 3 ರಿಂದ 7 ವಾರ್ಡ್ ಗಳಲ್ಲಿ ಗೆಲ್ಲುತ್ತದೆ ಎಂದು ಸಮೀಕ್ಷೆ ತಿಳಿಸಿದೆ

ಪ್ರಮುಖ ಸುದ್ದಿ

ಬೆಳಗಾವಿಯಲ್ಲಿ ಕಲ್ಲು ತೂರಾಟ ; ಪುಣೆಯಲ್ಲಿ ಕರ್ನಾಟಕ ಬಸ್‌ಗಳಿಗೆ ಮಸಿ ಬಳಿದ ಶಿವಸೇನಾ!

ಕರ್ನಾಟಕ-ಮಹಾರಾಷ್ಟ್ರ ಮುಖ್ಯಮಂತ್ರಿಗಳ ನಡುವಿನ ವಾಗ್ಸಮರ ಗಡಿ ಭಾಗದಲ್ಲಿ ಘರ್ಷಣಗೆ ಪ್ರಮುಖವಾಗಿದೆ. ಎಂ.ಇ.ಎಸ್ (M.E.S) ಪುಂಡರ ಹಾವಳಿ ಹೆಚ್ಚಾಗಿದ್ದು, ಕರ್ನಾಟಕ ರಾಜ್ಯದ ಬಸ್‌ಗಳನ್ನು ಅಡಗಟ್ಟಿ ಮಸಿ ಹಚ್ಚಿ ಆಕ್ರೋಶ ಹೊರಹಾಕಿದ್ದರು

ರಾಜಕೀಯ

ಬೆಳಗಾವಿಯಲ್ಲಿ ಭಾರೀ ಬಿಗಿ ಭದ್ರತೆ ಮಹಾರಾಷ್ಟ್ರ ಸಚಿವರ ಪ್ರವೇಶಕ್ಕೆ ನಿಷೇಧ

ಸರ್ಕಾರದ ಇಬ್ಬರು ಸಚಿವರು ಇಂದು ಬೆಳಗಾವಿಗೆ ಭೇಟಿ ನೀಡುವುದಾಗಿ ಹೇಳಿಕೆ ನೀಡಿರುವ ಕಾರಣ, ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಒರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.