vijaya times advertisements
Visit Channel

ನೆರೆ ಸಂತ್ರಸ್ತರ ಬಳಿ ಇಂತಹ ಮಾತುಗಳನ್ನಾಡಿ ಪ್ರಚೋದಿಸ್ತಿದ್ದಾರಾ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?

images

ಬೆಂಗಳೂರಿನಲ್ಲಿ ಭಿಕ್ಷೆ ಬೇಡಿ ಬಂದ ಹಣವನ್ನು ನೆರೆ ಸಂತ್ರಸ್ತರಿಗೆ ಕೊಟ್ಟಾದರೂ ಕೇಂದ್ರ ಸರ್ಕಾರದ ಕಣ್ಣು ತೆರೆಯುವಂತೆ ಮಾಡುತ್ತೇನೆ. ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗದೇ ಹೋದರೆ ಈ ಕ್ರಮದ ಹೊರತು ಬೇರೇನು ಮಾಡಲೂ ತೋಚುತ್ತಿಲ್ಲ ಅಂತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನುಡಿದ್ದಾರೆ.

ಬೆಳಗಾವಿಯ ಗೋಕಾಕ್ ಕ್ಷೇತ್ರಕ್ಕೆ ಭೇಟಿ ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನೆರೆ ಸಂತ್ರಸ್ತರ ಜತೆ ಚರ್ಚೆ ನಡೆಸಿದರು.  ಈ ವೇಳೆ ಮಾತನಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕೇಂದ್ರದಿಂದ ಒಂದು ರೂಪಾಯಿ ನೆರೆ ಪರಿಹಾರ ಸಿಕ್ಕಿಲ್ಲ .  ಬರಗಾಲ ಹಿನ್ನೆಲೆ ಹೆಚ್.ಡಿ ಕುಮಾರಸ್ವಾಮಿ ಬರ ಪರಿಹಾರಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ಹೀಗಾಗಿ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಅದರಲ್ಲಿ 10 ಸಾವಿರ ಕೊಟ್ಟು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದರು.

ಹಾಗೆಯೇ ಸಾಲ ಮರುಪಾವತಿಸಲು ಯಾರಾದ್ರೂ ನಿಮ್ಮನ್ನ ಒತ್ತಾಯಿಸಿದರೇ ಅವರ ಹೆಸರು ಬರೆದಿಟ್ಟು  ವಿಷ ಕುಡಿಯುತ್ತೇನೆ ಎಂದು ಹೇಳಿ ಎಂದು ನೆರೆ ಸಂತ್ರಸ್ತರಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಚೋದನೆ ಮಾತುಗಳನ್ನಾಡಿದ್ದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.