ಪಾಕ್ ದಾಳಿಗೆ ಭಾರತೀಯ ಯೋಧ ಬಲಿ

Share on facebook
Share on google
Share on twitter
Share on linkedin
Share on print

ಜಮ್ಮು, ನ. 21: ಪಾಕಿಸ್ಥಾನ ಮೂಲದ ನಾಲ್ವರು ಉಗ್ರರನ್ನು ಸದೆಬಡಿದ ಬೆನ್ನಲ್ಲೇ  ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಶನಿವಾರ ಬೆಳಿಗ್ಗೆ ಪಾಕಿಸ್ತಾನದ ರಕ್ಷಣಾ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ರಕ್ಷಣಾಪಡೆಯ ಯೋಧರೊಬ್ಬರು ಸಾವನ್ನಪ್ಪಿದ್ದಾರೆ.

ನೌಶೇರಾ ಸೆಕ್ಟರ್‌ನಲ್ಲಿ ಲ್ಯಾಮ್‌ ಪ್ರದೇಶದಲ್ಲಿರುವ ಗಡಿಯುದ್ದಕ್ಕೂ ಪಾಕಿಸ್ತಾನ ಪಡೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಘಟನೆಯಲ್ಲಿ ಹವಲ್ದಾರ್ ಒಬ್ಬರು ತೀವ್ರವಾಗಿ ಗಾಯಗೊಂಡು, ನಂತರ ಸಾವನ್ನಪ್ಪಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನದ ಈ ದಾಳಿಗೆ ಭಾರತೀಯ ಸೇನೆಯು ತೀವ್ರವಾಗಿ ಪ್ರತೀಕಾರ ತೀರಿಸಿತು. ಎರಡೂ ದೇಶಗಳ ನಡುವೆ ಸ್ವಲ್ಪ ಸಮಯದವರೆಗೆ ಗಡಿಯಾಚೆಗೆ ಗುಂಡಿನ ದಾಳಿ ಮುಂದುವರಿಯಿತು. ಇತ್ತಿಚೆಗೆ ಪಾಕಿಸ್ಥಾನ ಕದನ ವಿರಾಮವನ್ನು ಉಲ್ಲಂಘಿಸುವುದು ಸಾಮಾನ್ಯವಾಗಿದೆ ಗುರುವಾರ ಪಾಕಿಸ್ಥಾನದ ಉಗ್ರರಿಂದ ದೊಡ್ಡ ಪ್ರಮಾಣದ ಶಸ್ತಾಸ್ರ ಮತ್ತು ಸ್ಪೋಟಕಗಳನ್ನು ವಶಪಡಿಸಿಕೊಂಡಿತ್ತು ಭಾರತೀಯ ಸೇನೆ.

Submit Your Article