ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಪಿ.ವಿ ಸಿಂಧು ಈಗಂತೂ ಫುಲ್ ಫೇಮಸ್ ಆಗಿದ್ದಾರೆ…ನೋಡೋದಕ್ಕೂ ಕ್ಯೂಟ್ ಲುಕ್..ಸಖತ್ ಹೈಟ್..ಇಷ್ಟಿದ್ದರೆ ಯಾವ ಹುಡುಗನಾದ್ರೂ ಒಮ್ಮೆ ತಿರುಗಿ ನೋಡದೇ ಇರೋದಕ್ಕೆ ಸಾಧ್ಯವಾ ಹೇಳಿ..ಆದ್ರೆ ವಿಚಿತ್ರ ಏನ್ ಗೊತ್ತಾ..? ಇಲ್ಲೊಬ್ಬ 70 ಪ್ರಾಯದ ಹಿರಿಯ ನಾಗರಿಕ ಮಲಯಸ್ವಾಮಿ ಎಂಬವರು ಸದ್ಯ ಸಿಂಧು ಮೇಲೆ ಕಣ್ಣಿಟ್ಟಿದ್ದಾರೆ..ಅವಕಾಶ ಸಿಕ್ಕರೆ ಸಿಂಧುವನ್ನೇ ವರಿಸುವುದಾಗಿ ಹೇಳಿಕೊಂಡಿದ್ದಾರೆ.
ರಾಮನಾಥಪುರಂ ಜಿಲ್ಲೆಯ ಮ್ಯಾಜಿಸ್ಟ್ರೇಟ್ ನಡೆಸಿದ ಸಾಪ್ತಾಹಿತ ಜನಸ್ಪಂದನದಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿರುವ ಮಲಯಸ್ವಾಮಿ, ನನಗೀಗ 16 ವರ್ಷ ವಯಸ್ಸು. ಸಿಂಧು ಸಾಧನೆಯಿಂದ ಮರುಳಾಗಿದ್ದೇನೆ. ಅವರನ್ನೇ ಜೀವನಸಂಗಾತಿಯನ್ನಾಗಿ ಪಡೆಯಲು ಇಚ್ಛಿಸುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದು, ಭಾರೀ ಸುದ್ದಿಯಾಗಿದ್ದಾರೆ. ಮತ್ತೂ ವಿಶೇಷವೆಂದರೆ ಮದ್ವೆಗೆ ಸಿಂಧು ಒಪ್ಪದಿದ್ದರೆ ಅಪಹರಿಸಿಕೊಂಡುಹೋಗುವುದಾಗಿ ಹೇಳಿದ್ದಾರೆ…ಅಬ್ಬಬ್ಬಾ…ಎಂತಹ ವಿಚಿತ್ರ ಅಲ್ವಾ..?!