ಬಾಲಕಿ ನಾಪತ್ತೆ, ಪ್ರಕರಣ ದಾಖಲು

ಕಡಬ, ನ 27: ಹಾಲು ತರಲು ಪೇಟೆಗೆ ಹೋಗಿದ್ದ ಬಾಲಕಿ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನ 27 ರಂದು ನಡೆದಿದೆ.

ಬಿಳಿನೆಲೆ ಗ್ರಾಮದ ಮದ ಪರ್ಲ ನಿವಾಸಿ ಬೋಜಪ್ಪ ಗೌಡ ಅವರ ಪುತ್ರಿ ಶುಭಲತಾ (16 )ನಾಪತ್ತೆಯಾದವರು. ಅವರು ಎಂದಿನಂತೆ ಬಿಳಿನೆಲೆ ಪೇಟೆಗೆ ಹಾಲು ತರಲು ಹೋಗಿದ್ದು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಬಾಲಕಿಯ ತಂದೆ ಕಡಬ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Exit mobile version