
ಪ್ರತಿದಿನ ಮಹಾರಾಷ್ಟ್ರದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಜತೆಗೆ ದೇಶದಲ್ಲೆ ಅತಿ ಹೆಚ್ಚು ಕರೋನಾ ಸೋಂಕಿತರ ಕೇಸ್‍ಅನ್ನು ಮಹಾರಾಷ್ಟ್ರ ಹೊಂದಿದೆ. ಈಗಾಗಿ ಕರೋನಾ ನಿಯಂತ್ರಣ ಮಾಡುವುದು ಹೇಗೆ ಎಂಬ ತಲೆನೋವು ಮಹಾರಾಷ್ಟ್ರ ಸರ್ಕಾರಕ್ಕೆ ಕಾಡುತ್ತಿದೆ.
ಮಹಾರಾಷ್ಟ್ರದಲ್ಲಿ ಸದ್ಯ 1.75 ಲಕ್ಷ ಕೋವಿಡ್ ಸೋಂಕಿತರಿದ್ದು. 75 ಸಾವಿರಕ್ಕೂ ಹೆಚ್ಚು ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ ಹೆಚ್ಚಿನ ಪ್ರಕರಣ ಮುಂಬೈನದ್ದೇ ಆಗಿದೆ. ದೇಶಾದ್ಯಂತ ಕೇಂದ್ರ ಸರ್ಕಾರ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಕಫ್ರ್ಯೂ ಹಾಕಿದೆ. ಈ ನಡುವೆ ಮುಂಬೈ ಪೊಲೀಸ್ ಆಯುಕ್ತರು ಇಡೀ ನಗರಕ್ಕೆ ಅನ್ವಯವಾಗುವಂತೆ 144 ಕಲಂ ನಿಷೇಧಾಜ್ಞೆ ಜಾರಿಮಾಡಿದ್ದಾರೆ.
ಧಾರ್ಮಿಕ ಸ್ಥಳಗಳು ಸೇರಿ ಎಲ್ಲೆಡೆ ನಿಷೇಧಾಜ್ಞೆ ಅನ್ವಯವಾಗಲಿದ್ದು, ನಗರಾಡಳಿತ ಕಂಟೇನ್‍ಮೆಂಟ್ ಝೋನ್ ಎಂದು ಘೋಷಿಸಿದ ಪ್ರದೇಶಗಳಲ್ಲಿ ಯಾರೂ ಕೂಡ ಓಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಜತೆಗೆ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ಕಫ್ರ್ಯೂ ಜಾರಿಯಲ್ಲಿದ್ದು ಈ ವೇಳೆಯಲ್ಲಿ ಯಾರೂ ಹೊರಗೆ ಬರುವಂತೆಯೇ ಇಲ್ಲ. ವೈದ್ಯಕೀಯ ಸೇವೆ ಅಥವಾ ತುರ್ತು ಪರಿಸ್ಥಿತಿ ಇದ್ದರ ಅಷ್ಟೇ ಜನರ ಸಂಚಾರಕ್ಕೆ ಅವಕಾಶವಿದೆ. ಇನ್ನು ಮುಂಬೈ ಜನರು ಅಕ್ಷರಶಃ ಮನೆಯಲ್ಲೆ ಬಂಧಿಯಾಗಲಿದ್ದಾರೆ. ಕರೋನಾ ಸೋಂಕನ್ನು ತಡೆಗಟ್ಟಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಜತೆಗೆ ಜನರು ತಮ್ಮ ಆರೋಗ್ಯ ಕಾಪಾಡಿಕೊಳಲು ಈ ನಿಯಮ ಪಾಲಿಸಲೇಬೇಕು ಎಂದು ಪೊಲೀಸರು ತಿಳಿಸಿದ್ದಾರೆ.