ಬೆಂಗಳೂರು: ಯೋಗಿ ಸರ್ಕಾರ ದೇಶಕ್ಕೆ ಕಪ್ಪು ಚುಕ್ಕಿಯಾಗಿದೆ. ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರೋ ದೌರ್ಜನ್ಯದಿಂದ ನಾವು ಇಡೀ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿಡಿಕಾರಿದ್ದಾರೆ.
ಇವತ್ತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತ ಪಟ್ಟ ಮನಿಶಾ ಎಂಬ ಹೆಣ್ಣುಮಗಳ ಬಗ್ಗೆ ಮಾತನಾಡಿದ ಇವರು ಯೋಗಿ ಆದಿತ್ಯನಾಥ್ ಸರ್ಕಾರ ಸಂಸ್ಕಾರಯುತ ಭಾರತ ದೇಶಕ್ಕೆ ಕಪ್ಪು ಚುಕ್ಕೆ ಇಟ್ಟಿದೆ ಎಂದರು.
ಕೇಂದ್ರ ಸರ್ಕಾರ ಸುರೇಶ್ ಅಂಗಡಿ ಕುಟುಂಬಕ್ಕೂ ಸರ್ಕಾರ ನ್ಯಾಯ ಒದಗಿಸಲಿಲ್ಲ. ರೈಲ್ವೇ ಸಚಿವರಾದ ಸುರೇಶ್ ಅಂಗಡಿ ಪಾರ್ಥವ ಶರೀರವನ್ನು ಬೆಳಗಾವಿಗೆ ತಂದು ಗೌರವಯುತವಾಗಿ ಸರಕಾರಿ ಮರ್ಯಾದೆಗಳೊಂದಿಗೆ ಕುಟುಂಬ ಸದಸ್ಯರೊಂದಿಗೆ ಅಂತ್ಯಕ್ರಿಯೆ ಮಾಡಬಹುದಿತ್ತು.ಕೇಂದ್ರ ಸರ್ಕಾರ ಆ ಪ್ರಯತ್ನವನ್ನೂ ಮಾಡಲಿಲ್ಲ. ಬೆಳಗಾವಿಯಲ್ಲಿ ಆರ್ಮಿ ಬೇಸ್ ಕೂಡ ಇದೆ. ಆದ್ದರಿಂದ ಪಾರ್ಥಿವ ಶರೀರವನ್ನು ಇಲ್ಲಿಗೆ ತರಬಹುದಿತ್ತು ಎಂದು ಕೇಂದ್ರ ಸರ್ಕಾರವನ್ನ ಟೀಕಿಸಿದ್ದಾರೆ.