vijaya times advertisements
Visit Channel

ರವಿಚಂದ್ರನ್‌ಗೆ ರಾಗಿಣಿ ತುಪ್ಪ ಕೊಟ್ಟಿಲ್ಲವೇ..?!

ragini

ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಕೇಳಿರದ ಡ್ರಗ್ಸ್ ದಂಧೆಯ ಕುರಿತಾದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಬಾಲಿವುಡ್ ಬಳಿಕ ಈ ದಂಧೆಯ ಕೊಂಡಿ ನೇರವಾಗಿ ಸೇರಿಕೊಂಡಿರುವುದು ಕನ್ನಡ ಚಿತ್ರರಂಗವನ್ನು ಎನ್ನುವುದು ವಿಶೇಷ. ಇಲ್ಲಿ ಉತ್ತರದಿಂದ ಬಂದ ಇಬ್ಬರು ನಾಯಕಿಯರು ಕೂಡ ಸೇರಿರುವುದೇ ಈ ಸಂಬಂಧಕ್ಕೆ ಕಾರಣ ಎನ್ನುವುದು ಮತ್ತೊಂದು ಉಲ್ಲೇಖ. ಆದರೆ.. ಡ್ರಗ್ಸ್ ವಿಚಾರದಲ್ಲಿ ಚಿತ್ರರಂಗದ ಮಂದಿ ಮಾತ್ರ ಯಾಕೆ ತನಿಖೆಗೆ ಒಳಪಡುತ್ತಿದ್ದಾರೆ? ನಟಿಯರನ್ನೇ ಮಾತ್ರ ಯಾಕೆ ವಿಚಾರಿಸಲಾಗುತ್ತಿದೆ?

ಬಂಧಿತ ನಟಿಯರಿಗೆ ಅನ್ಯಾಯವಾಗಿದೆ ಎನ್ನುವ ಅಭಿಪ್ರಾಯ ಸದ್ಯಕ್ಕೆ ಯಾರಿಗೂ ಇಲ್ಲ. ಹಾಗೆ ಅಂದುಕೊಂಡಿದ್ದರೆ ಅದು ಡ್ರಗ್ಸ್‌  ದಂಧೆಯಲ್ಲಿ ಭಾಗಿಯಾದವರಿಗೆ ಮಾತ್ರ. ಯಾಕೆಂದರೆ ಅವರಿಗೆ ಪರಸ್ಪರರನ್ನು ರಕ್ಷಿಸಿಕೊಳ್ಳಬೇಕಿದೆ. ಆದರೆ ರಾಗಿಣಿಯ ವಿಚಾರ ಬಂದಾಗ ಯಾರು ಕೂಡ ರವಿಚಂದ್ರನ್ ಹೆಸರು ಯಾಕೆ ನೆನಪಿಸುತ್ತಿಲ್ಲ ಎನ್ನುವುದು ಮಾತ್ರ ವಿಚಿತ್ರ. ಯಾಕೆಂದರೆ ರವಿಚಂದ್ರನ್ ಡ್ರಗ್ಸ್ ವಿಚಾರದಲ್ಲಿ ಸಂಬಂಧ ಇರಿಸಿದ್ದಾರ ಇಲ್ಲವಾ ಎನ್ನುವುದು ಎರಡನೆಯ ವಿಚಾರ. ಆದರೆ ಅನುಮಾನಕ್ಕೂ ಯಾಕೆ ಹೆಸರು ಪ್ರಸ್ತಾಪವಾಗಿಲ್ಲ ಎನ್ನುವುದು ವಿಶೇಷ. ಅಂದಹಾಗೆ ಯಾಕೆ ಪ್ರಸ್ತಾಪ ಆಗಬೇಕು ಎನ್ನುವುದಕ್ಕೂ ಕಾರಣಗಳಿವೆ.

ರವಿಚಂದ್ರನ್ ನೇರವಾಗಿಯೇ ಹೇಳಿಕೊಂಡಿದ್ದರು!

ರವಿಚಂದ್ರನ್ ಯಾವಾಗಲೂ ಹಾಗೆ ಇದ್ದುದನ್ನು ಇದ್ದಂತೆ ಹೇಳುತ್ತಾರೆ ಎನ್ನುವ ಕಾರಣಕ್ಕೆ ಸುದ್ದಿಯಾದವರು. ಅವರ ಕಣ್ಣುಗಳಲ್ಲೇ ಅಮಲಿದೆ ಹಾಗಾಗಿ ವಿಪರೀತ ಕುಡಿಯುತ್ತಿರಬಹುದು ಎಂದುಕೊಂಡವರು ಹಲವರು. ಆದರೆ ಅದು ನಟನೆಯ ವೇಳೆ ಮಾತ್ರ ತೋರಿಸುವ ನೋಟದ ಶೈಲಿ ಎನ್ನುವುದನ್ನು ಆಪ್ತರು ಚೆನ್ನಾಗಿ ಬಲ್ಲರು. ಅದೇ ರೀತಿ ಅವರಿಗೆ ಸಿಗರೇಟು ಸೇದುವ ಅಭ್ಯಾಸವೂ ಇಲ್ಲ. ಆದರೂ ಸಿನಿಮಾಗಳಲ್ಲಿ ತುಂಬ ಚೆನ್ನಾಗಿ ಸೇದಿ ಸುರುಳಿಗಳನ್ನು ಬಿಡಬಲ್ಲರು. ಆದರೆ ಅವರಿಗಿರುವ ಚಾಳಿಯನ್ನು ಎಷ್ಟೋ ಬಾರಿ ಸ್ವತಃ ಬಾಯಿಬಿಟ್ಟು ಹೇಳಿಕೊಂಡಿದ್ದಾರೆ. ಅಸೇ ಕ್ಯಾಸಿನೊ..! ಗೋವಾ, ಶ್ರೀಲಂಕಾಗೆ ಹೋಗಿ ಕ್ಯಾಸಿನೋಗಳಲ್ಲಿ ಆಡಿ ದುಡ್ಡು ಕಳೆದುಕೊಳ್ಳುವುದೇ ನನ್ನ ದಡ್ಡತನ ಎನ್ನುವುದು ಅವರ ಮಾತು. ಅಷ್ಟು ದೂರ ಹೋದವರು ಕ್ಯಾಸಿನೊ ಮಾತ್ರ ಆಡುತ್ತಾರ ಎಂದರೆ ಡ್ರಗ್ಸ್ ಸಹವಾಸ ಇದೆ ಎಂದು ಅರ್ಥವಲ್ಲ. ಸಾರ್ಜನಿಕವಾಗಿ ಹೇಳಲಾಗದ ಒಂದಷ್ಟು ಖಲಯಾಲಿಗಳು ಕೂಡ ಅವರಿಗಿದೆ ಎನ್ನುವ ಬಗ್ಗೆ ಹಲವರಿಗೆ ನಂಬಿಕೆ ಇದೆ. ಅದೇ ಕಾರಣಕ್ಕೆ ಅವರು ಕೂಡ ಹೊರಗೆ ಹೇಳುತ್ತಿಲ್ಲವಂತೆ.

ರಾಗಿಣಿಯೊಂದಿಗಿನ ಸ್ನೇಹ

`ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ರವಿಚಂದ್ರನ್ ಜತೆ ತುಪ್ಪ ಬೇಕಾ ತುಪ್ಪ ಎಂದು ಕುಣಿದ ರಾಗಿಣಿ ಆ ಬಳಿಕ ತುಪ್ಪದ ಹುಡುಗಿಯಾಗಿಯೇ ಗುರುತಿಸಿಕೊಂಡಿದ್ದರು. ರವಿಚಂದ್ರನ್ ಚಿತ್ರರಂಗದಲ್ಲಿ ಬಹುಶಃ ಈಗ ಇರುವ ಎಲ್ಲರನ್ನೂ ಅಂದರೆ ತಮಗಿಂತ ಹಿರಿಯರನ್ನು ಕೂಡ ಏಕ ವಚನದಲ್ಲೇ ಕರೆಯಬಲ್ಲಂಥ ವ್ಯಕ್ತಿ. ಅದು ದೊಡ್ಡಣ್ಣ ಇರಲಿ, ಇನ್ಯಾರೇ ಇರಲಿ “ಬಾರಯ್ಯ..” ಎಂದೇ ಮಾತನಾಡಿಸುತ್ತಾರೆ. ಬಹಳ ಮಂದಿಗೆ ಅದು ಅಭ್ಯಾಸವೂ ಹೌದು. ಸ್ನೇಹಿತ ಎನ್ನುವ ಪಟ್ಟಿಯಲ್ಲಿರಿಸಿಕೊಂಡು ಅವಂಬರೀಷ್ ಅವರನ್ನೂ ನೀನು ಎಂದೇ ಕರೆಯುತ್ತಿದ್ದ ರವಿಯನ್ನು ಏಕ ವಚನದಲ್ಲಿ ಕರೆಯುವವರು ಯಾರೂ ಇಲ್ಲ. ಎಲ್ಲರೂ ಗೌರವ ಪೂರ್ವಕವಾಗಿ ರವಿ ಸರ್ ಎಂದೇ ಸಂಬೋಧಿಸುತ್ತಾರೆ. ಆದರೆ ಅಂಥದ್ದರಲ್ಲಿ ಈ ಕ್ರೇಜಿಸ್ಟಾರ್‌ನನ್ನು ತುಂಬಿದ ಸಭೆಯಲ್ಲಿ “ಹಾಯ್ ರವಿ.. ಹೇಗಿದ್ದೀಯ?” ಎಂದು ಮಾತನಾಡಿಸುವ ನಾಯಕಿ ಒಬ್ಬಳಿದ್ದರೆ ಅದು ರಾಗಿಣಿ ಮಾತ್ರ! ಸಾಮಾನ್ಯವಾಗಿ ಯಾವ ನಾಯಕಿಯರಿಗೂ ಸದರ ನೀಡದ ರವಿಚಂದ್ರನ್, ಈ ಹುಡುಗಿಗೆ ಇಷ್ಟೊಂದು ಸಲುಗೆ ಕೊಡಲು ಕಾರಣವೇನು ಎನ್ನುವುದು ಈಗಲೂ ಗೌಣ. ಇದರೊಳಗೆ ಶ್ರೀಲಂಕಾ, ಕ್ಯಾಸಿನೋ ಮಾತ್ರ ಇದೆಯಾ ಅಥವಾ ಡ್ರಗ್ಸ್ ಕೂಡ ಸೇರಿದೆಯಾ ಎನ್ನುವುದು ಮುಂದಿನ ದಿನಗಳಲ್ಲಿ ಬೆಳಕಿಗೆ ಬರಬಹುದು.

Latest News

ರಾಜಕೀಯ

ರಾಜ್ಯದ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಏಕೈಕ ಪಕ್ಷ ಜನತಾದಳ ಮಾತ್ರ : ಹೆಚ್.ಡಿ ಕುಮಾರಸ್ವಾಮಿ

ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ(HD Kumarswamy) ಪಂಚರತ್ನ ಯಾತ್ರೆಯಲ್ಲಿ ನಿರತರಾಗಿದ್ದು, ಚುನಾವಣೆ ಹಂತದ ಪ್ರಮುಖ ಘಟ್ಟದಲ್ಲಿ ಆಯಾ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ.

ರಾಜ್ಯ

ವಯಸ್ಸು ನೂರು ದಾಟಿದರೂ ಈ ಸಿದ್ದಪ್ಪಜ್ಜ ಈಗಲೂ ನಡೆಸುತ್ತಾರೆ ಪ್ರಾವಿಜನ್‌ ಸ್ಟೋರ್‌!

ಹೊಸ ಚಿಂತನೆಯ ಹಾದಿಗೆ ಹಂಬಲಿಸುತ್ತಿರುತ್ತಾರೆ. ಹೀಗೆ, ಬಿಪಿ ಶುಗರ್(BP) ಯಾವುದೇ ಸಮಸ್ಯೆಯಿಲ್ಲದೇ ಯಶಸ್ವಿಯಾಗಿ 103 ವರ್ಷ ಪೂರೈಸಿರುವ ಹಿರಿಯರೊಬ್ಬರ ಕಥೆ ಇಲ್ಲಿದೆ.

ರಾಜಕೀಯ

ಗೋ ಹತ್ಯಾ ನಿಷೇಧ ವಿಧೇಯಕದಿಂದ ಕರ್ನಾಟಕ್ಕೆ ಎಷ್ಟು ಲಾಭವಾಯಿತು? : ಪ್ರಿಯಾಂಕ್‌ ಖರ್ಗೆ

ಈ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಗೋವುಗಳ ನಿರ್ವಹಣೆ ವೆಚ್ಚ ಭರಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದರು.

ದೇಶ-ವಿದೇಶ

PFI ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್!

ಇನ್ನು ಯುಎಪಿಎ ಕಾಯ್ದೆಯಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು 5 ವರ್ಷದ ಅವಧಿಗೆ ಕೇಂದ್ರ ಸರ್ಕಾರ ನಿಷೇಧಿಸಿತ್ತು.