ಬೆಂಗಳೂರು:
ಲಾಕ್‍ಡೌನ್ ನಡುವೆಯೂ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ.
ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಮಂಗಳವಾರ ರಾತ್ರಿಯಿಂದ ಬೆಂಗಳೂರು ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಪೊಲೀಸರು ನಾಕಾಬಂದಿ ನಿರ್ಮಿಸಿ ಅನಗತ್ಯ ವಾಹನ ಸಂಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ನಡೆಸಿದ್ದಾರೆ.
ಅದರಂತೆ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದ ಮುಂದೆ ಪೊಲೀಸರ ನಾಕ ಬಂದಿ ನಿರ್ಮಿಸಿದ್ದರೂ, ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ಪೊಲೀಸರು ಚಳಿ ಬಿಡಿಸಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರತಿಯೊಂದು ವಾಹನಗಳನ್ನ ತಡೆದು ಪರಿಶೀಲನೆ ನಡೆಸುತ್ತಿದ್ದು, ಅನಗತ್ಯವಾಗಿ ಓಡಾಟ ನಡೆಸಿದ್ದು ಕಂಡು ಬಂದಲ್ಲಿ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಊರು ಬಿಡುವರರು ಕಡಿಮೆಯಾಗಿಲ್ಲ:
ಲಾಕ್‍ಡೌನ್ ನಡುವೆಯೂ ಬೆಂಗಳೂರು ಬಿಟ್ಟು ಹೋಗೊರ ಸಂಖ್ಯೆ ಇನ್ನು ನಿಂತಿಲ್ಲ.ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಲಾಕ್‍ಡೌನ್ ನಡುವೆಯೂ ಹೊರ ಜಿಲ್ಲೆಗಳ ನೂರಾರು ಮಂದಿ ತಮ್ಮ ಊರುಗಳಿಗೆ ಹೋಗಲು ಹರಸಾಹಸ ನಡೆಸಿದ್ದಾರೆ. ಆದರೆ ಲಾಕ್‍ಡೌನ್‍ನಿಂದಾಗಿ ನಗರದಲ್ಲಿ ಬಸ್‍ಗಳು,ಆಟೋಗಳ ಸಂಚಾರದಲ್ಲಿ ವ್ಯತ್ಯಯ ಹಿನ್ನಲೆ, ಗುರುವಾ ಓಡಿಸ್ಸಾ ಗೆ ಹೊರಡಲಿರುವ ರೈಲಿಗೆ ನಿನ್ನೆ ರಾತ್ರಿಯಿಂದಲೇ ವಲಸೆ ಕಾರ್ಮಿಕರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕಾದು ಕುಳಿತಿದ್ದಾರೆ.
30ಕ್ಕೂ ಹೆಚ್ಚು ಪ್ರಯಾಣಿಕರು ರಾತ್ರಿ
ನಾಳೆ ಯಶವಂತಪುರದಿಂದ ಹೊರಡುವ ರೈಲಿಗಾಗಿ ನಿಲ್ದಾಣದಲ್ಲೇ ಕಾದು ಕುಳಿತಿರುವ ಕಾರ್ಮಿಕರು
ಪೊಲೀಸ್ ಆಯುಕ್ತರ ವಾಕಿಂಗ್:
ಲಾಕ್‍ಡೌನ್ ಹಿನ್ನೆಲೆಯಲ್ಲಿ ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಕಬ್ಬನ್ ಪಾರ್ಕ್‌ನಲ್ಲಿ ವಾಕಿಂಗ್ ಮುಗಿಸಿ, ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನ ಮಾತನಾಡಿಸಿ, ಭದ್ರತೆ ಪರಿಶೀಲನೆ ನಡೆಸಿದ್ದಾರೆ.
========