ವಿಶ್ವದಲ್ಲಿ ಮರಣ ಭಯ ಸೃಷ್ಟಿಸಿರುವ ರಾಕ್ಷಸ ಕೊರೊನಾ ವೈರಸ್ ನ ಅಸಲಿ ಚಿತ್ರ ಹೇಗಿದೆ ಗೊತ್ತಾ?

Share on facebook
Share on google
Share on twitter
Share on linkedin
Share on print

ವಿಶ್ವದಾದ್ಯಂತ ಭಯ ಭೀತಿ ಹುಟ್ಟಿಸಿರುವ ಮಾರಣಾಂತಿಕ ಕೊರೊನಾ ವೈರಸ್ ನ ಅಸಲಿ ಚಿತ್ರ ಇದೀಗ ಬಹಿರಂಗವಾಗಿದೆ. ಇಲ್ಲಿಯವರೆಗೂ ೯೦೬ ಮಂದಿ ಭಾರತೀಯರನ್ನು ಕಾಡಿಸಿರುವ ಕೊರೊನಾ ವೈರಸ್ ನ ನಿಜವಾದ ಚಿತ್ರಗಳು ಬಿಡುಗಡೆಯಾಗಿವೆ. ಕೊರೊನಾ ವೈರಸ್ ಚಿತ್ರಗಳನ್ನು ಪುಣೆಯ ಐಸಿಎಂಆರ್-ಎನ್‌ಐವಿ ವಿಜ್ಞಾನಿಗಳ ತಂಡ ಸೆರೆಹಿಡಿದಿದೆ.

ಟ್ರಾನ್ಸ್ ಮಿಷನ್ ಎಲೆಕ್ಟ್ರಾನಿಕ್ ಮೈಕ್ರೋಸ್ಕೋಪ್ ಬಳಸಿ ಕೊರೊನಾ ವೈರಸ್ ಚಿತ್ರಗಳನ್ನು ಸೆರೆಹಿಡಿಯಲಾಗಿದ್ದು, ಈ ಚಿತ್ರಗಳು ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ಪ್ರಕಟಗೊಂಡಿದೆ. ಇದು ಭಾರತದಲ್ಲಿ ದೃಢಪಟ್ಟ ಮೊದಲ ಕೋವಿಡ್-೧೯ ಪಾಸಿಟೀವ್ ರೋಗಿಯಲ್ಲಿದ್ದ ವೈರಾಣುವಿನ ಚಿತ್ರಗಳು.

Submit Your Article