ಕಳೆದ 7 ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಹಾಗು ಡೀಸಲ್ ಬೆಲೆ ಶನಿವಾರದ ಬೆಳಗ್ಗೆ ಹೊತ್ತಿಗೆ ಮತ್ತೆ ಏರಿಕೆ ಕಂಡಿದ್ದು ಒಟ್ಟಾರೆ ವಾರದಲ್ಲಿ 4 ರೂ ಹೆಚ್ಚಳ ಕಂಡಿದೆ.
ಕೊರೊನದಿಂದಾಗಿ ತೈಲ ಪೂರೈಕೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲೂ ಏರಿಕೆ ಕಂಡಿದ್ದು, ಶನಿವಾರದಂದು ಪೆಟ್ರೋಲ್ 59 ಪೈಸೆ ಹಾಗು ಡೀಸಲ್ 58 ಪೈಸೆ ಏರಿಕೆಯಾಗುವ ಮೂಲಕ ಈ ವಾರದಲ್ಲಿ ಪೆಟ್ರೋಲ್ ಹಾಗು ಡೀಸಲ್ ತಲಾ 4 ರೂಪಾಯಿಗಳ ಹೆಚ್ಚಳ ಕಂಡಿದೆ.
ಪೆಟ್ರೋಲ್, ಡೀಸೆಲ್ ದರ ಮಹಾರಾಷ್ಟ್ರದಲ್ಲಿ 0.58 ಪೈಸೆ, ಕೇರಳದಲ್ಲಿ 0.60 ಪೈಸೆ ಏರಿಕೆ ಕಂಡಿದ್ದರೆ ಮಧ್ಯ ಪ್ರದೇಶ ಹಾಗೂ ಕರ್ನಾಟಕದಲ್ಲಿ ತಲಾ 0.62 ಪೈಸೆ ಏರಿಕೆಯಾಗಿದೆ. ಪೆಟ್ರೋಲ್‌ದರ 74.57 ರೂಪಾಯಿ ಯಿಂದ 75.16 ರೂ. ವರೆಗೆ ಏರಿಕೆ ಯಾಗಿದ್ದರೆ ಡೀಸಲ್ ದರ 72.81 ರೂ. ಯಿಂದ 73.39 ರೂ ವರೆಗೆ ಹೆಚ್ಚಳವಾಗಿದೆ.