ಇತ್ತೀಚೆಗೆ ಚಂದನವನದಲ್ಲಿ ಥ್ರಿಲ್ಲರ್ ಚಿತ್ರಗಳು ಎಂಟ್ರಿ ಕೊಡ್ತು ಅಂದ್ರೆ ಪಕ್ಕಾ ಪೈಸಾ ವಸೂಲಿ ಅಂತ ಅರ್ಥ . ಅದಕ್ಕಾಗಿ ಇದೀಗ ಮೇಲೊಬ್ಬ ಮಾಯಾವಿ ಚಿತ್ರವು ಕೂಡ ಸ್ಯಾಂಡಲ್ ವುಡ್ ಗೆ ಭರ್ಜರಿಯಾಗಿ ಎಂಟ್ರಿ ಕೊಡಲು ರೆಡಿಯಾಗಿದೆ.
ಅಂದಹಾಗೆ ಮೊದಲ ಬಾರಿ ಬಿ. ನವೀನ್ ಕ್ರಷ್ಣ. ಆಕ್ಷನ್ ಕಟ್ ಹೇಳುತ್ತಿದ್ದು ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಾನು ಅವನಲ್ಲ ಅವಳು ಚಿತ್ರದ ಮೂಲಕ ಮನೆಮಾತಾಗಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಈ ಚಿತ್ರದ ನಾಯಕ ನಟನಾಗಿ ಬಣ್ಣಹಚ್ಚಿದ್ದು ; ನಾಯಕಿಯಾಗಿ ಅನನ್ಯ ಶೆಟ್ಟಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಹಿರಿಯ ಪತ್ರಕರ್ತ ಚಕ್ರವರ್ತಿ ಚಂದ್ರಾಚೂಡ್ ಕಾಣಿಸಿಕೊಂಡಿದ್ದು ಚಿತ್ರದ ಬಗ್ಗೆ ಜನರಲ್ಲಿ ಕ್ಯೂರ್ಯಾಸಿಟಿ ಹೆಚ್ಚಿದೆ.
ಸೆನ್ಸಾರ್ ಮಂಡಳಿಯು ಈ ಚಿತ್ರಕ್ಕೆ ಯಾವುದೇ ಕಟ್ ಹಾಗು ಮ್ಯೂಟ್ ಇಲ್ಲದೇ ಎ ಕ್ಯಾಟಗರಿಯ ಪ್ರಮಾಣ ಪತ್ರ ನೀಡಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಮುಗಿದ್ದಿದ್ದು : ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಒಟ್ಟಾರೆ ಮೇಲೊಬ್ಬ ಮಾಯವಿ ಸಿನಿಮಾ ಲಾಕ್ಡೌನ್ ಮುಗಿದ ನಂತರ ತೆರೆ ಕಾಣಲಿದೆ.