ಅಭಿಮಾನಿಗಳಿಂದ “ಅಂಬಿಗುಡಿ” ನಿರ್ಮಾಣ

ಮದ್ದೂರು, ನ. 19: ಖ್ಯಾತ ನಟ ದಿವಂಗತ ಅಂಬರೀಷ್ ಅಭಿಮಾನಿಗಳು  ಮದ್ದೂರಿನ ಸಮೀಪದ ಪಟ್ಟಣವಾದ ಹೊಟ್ಟೇಗೌಡನ ದೊಡ್ಡಿಯಲ್ಲಿ  ಅಂಬರೀಷ್ ನೆನಪಿಗಾಗಿ  ಅಂಬಿಗುಡಿಯನ್ನು ತಯಾರಿಸಿ  ನಟನ ಮೇಲಿನ ಅಭಿಮಾನವನ್ನು ಎತ್ತಿಹಿಡಿದಿದ್ದಾರೆ. ಈ ”ಅಂಬಿಗುಡಿ“ಯನ್ನು ಇದೇ, ನ 24ರಂದು ಅಂಬರೀಷ್‌ ಪತ್ನಿ, ಸಂಸದೆ ಸುಮಲತಾರವರು  ಉದ್ಘಾಟನೆ ಮಾಡಲಿದ್ದಾರೆ. ಅವರ ಪುತ್ರ ಅಭಿಷೇಕ್, ನಟರಾದ ದರ್ಶನ್, ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 ಈ ಕಾರ್ಯವನ್ನು ಅಂಬರೀಷ್‌ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಸ್ವಂತ ಹಣದಿಂದ ₹2 ಲಕ್ಷ ವೆಚ್ಚದಲ್ಲಿ ಅಂಬರೀಷ ಅವರ ಕಂಚಿನ ಪುತ್ಥಳಿಯನ್ನು ಮಾಡಿಸಿದ್ದಾರೆ. ಅದನ್ನು ಗ್ರಾಮದ ವೃತ್ತದಲ್ಲಿ ಪ್ರತಿಷ್ಟಾಪನೆಗೊಳಿಸಿ ಗುಡಿ ನಿರ್ಮಿಸಿದ್ದಾರೆ. ಅದರ ಸಮೀಪದಲ್ಲಿ ಚಿಕ್ಕದೊಂದು ಉದ್ಯಾನವನ್ನೂ ನಿರ್ಮಿಸಲಾಗಿದೆ.  ನಾಲ್ಕು ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗುಡಿ ನಿರ್ಮಾಣಕ್ಕೆ ಒಟ್ಟು ₹8 ಲಕ್ಷ ಖರ್ಚಾಗಿದೆ.

ಈ  ಗ್ರಾಮದಲ್ಲಿ ಕಳೆದ  20 ವರ್ಷಗಳ ಹಿಂದೆ ಅಂಬರೀಷ್‌ ಅಭಿಮಾನಿಗಳು ಒಂದು ಸಂಘವನ್ನು ಸ್ಥಾಪಿಸಿದ್ದು, ಅವರ ಹೆಸರಿನಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು ಅಂಬರೀಷ ನಿಧನದ ನೋವನ್ನು ಮರೆಯಲಾಗಲಿಲ್ಲ. ಅವರ ನೆನಪಿಗಾಗಿ 40ಕ್ಕೂ ಹೆಚ್ಚು ಯುವಕರು ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ದೇಣಿಗೆಯಾಗಿ ನೀಡಿದ್ದು, ಈ ಹಣದಲ್ಲಿ ‘ಅಂಬಿ ಗುಡಿ’ ನಿರ್ಮಿಸಲಾಗಿದೆ. ಅಂಬರೀಷ ಅವರ ಅಸ್ಥಿಯನ್ನು ಹಾಕಿ ಅದರ ಮೇಲೆ ಕಂಚಿನ ಪುತ್ಥಳಿಯನ್ನು ಇರಿಸಲಾಗಿದೆ. ಈ ಮೂಲಕ ನಮ್ಮ ಹೃದಯದಲ್ಲಿ ಅಂಬಿ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ’ ಎಂದು ಸಂಘದ ಅಧ್ಯಕ್ಷ ನಾಗೇಶ್‌ ಅವರು ತಿಳಿಸಿದ್ದಾರೆ.

Exit mobile version