ಅಭ್ಯರ್ಥಿಗಳ ಪಟ್ಟಿ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟ

ಬೆಂಗಳೂರು, ಅ. 28: ಕರ್ನಾಟಕ ಲೋಕಸೇವಾ ಆಯೊಗವು 2020ರ  ಆಗಸ್ಟ್ 24 ರಂದು ನಡೆಸಿದ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಯ ಉಳಿಕೆ ಮೂಲ ವೃಂದ 94+ಹೈದ್ರಾಬಾದ್-ಕರ್ನಾಟಕ-12,  ಒಟ್ಟು 106 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯ ಪರೀಕ್ಷೆಗೆ 1:20 ಅನುಪಾತದಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳ ಪಟ್ಟಿಯನ್ನು ಆಯೋಗದ ವೆಬ್‍ಸೈಟ್  http://kpsc.kar.nic.in/list/eligibility    ನಲ್ಲಿ ಹಾಗೂ ಕಟ್‍ ಆಫ್ ಅಂಕಗಳನ್ನು        http://kpsc.kar.nic.in/cutoff      ನಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ದಿನಾಂಕದ ಕುರಿತು ಶೀಘ್ರದಲ್ಲಿಯೇ ತಿಳಿಸಲಾಗುವುದು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

Exit mobile version