ಅಮೆರಿಕದ ಖ್ಯಾತ ಕವಯತ್ರಿ ಗ್ಲುಕ್ ಗೆ ನೊಬೆಲ್

ಸ್ಟಾಕ್ ಹೋಮ್: ಪ್ರಸಕ್ತ ಸಾಲಿನ ಸಾಹಿತ್ಯ ನೊಬೆಲ್ ಪುರಸ್ಕಾರಕ್ಕೆ ಅಮೆರಿಕದ ಖ್ಯಾತ ಕವಯತ್ರಿ ಲೂಯೀಸ್ ಗ್ಲುಕ್ ಅವರು ಪಾತ್ರರಾಗಿದ್ದಾರೆ. ಗ್ಲುಕ್ ಅವರ ಸಮಗ್ರ ಕಾವ್ಯಕ್ಕೆ ಈ ಪುರಸ್ಕಾರ ಲಭ್ಯವಾಗಿದ್ದು, ಮೂರು ವರ್ಷಗಳ ಬಳಿಕ ದೊರೆತಿರುವ ಸಾಹಿತ್ಯ ನೊಬೆಲ್ ಇದಾಗಿದೆ.

2018ರಲ್ಲಿ ಸಾಹಿತ್ಯ ನೊಬೆಲ್ ಘೋಷಣೆ ವೇಳೆ ಸ್ವೀಡಿಶ್ ಅಕಾಡೆಮಿಯ ಕೆಲವು ಸದಸ್ಯರು ಸೆಕ್ಸ್ಗಾಗಿ ಪ್ರತಿಷ್ಠಿತ ಗೌರವ ಕೊಡುವ ವಿಷಯದಲ್ಲಿ ಲಾಬಿ ಮಾಡಿದ್ದರು ಎನ್ನುವ ಆರೋಪಗಳು ಕೇಳಿಬಂದ್ದಿದ್ದವು. ಈ ಕಾರಣದಿಂದಾಗಿ ನಂತರ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ನೀಡುವುದನ್ನು ನೊಬೆಲ್ ಅಕಾಡೆಮಿ ನಿಲ್ಲಿಸಿತ್ತು. ಗ್ಲುಕ್ ಅವರಿಗೆ ಈ ಗೌರವ ಲಭ್ಯವಾಗುವ ಮೂಲಕ ಸಾಹಿತ್ಯ ನೊಬೆಲ್ ಪರಂಪರೆ ಮತ್ತೆ ಮುಂದುವರಿದಿದೆ.

ಗ್ಲುಕ್ ಅವರು 1968ರಲ್ಲಿ ‘ಫಸ್ಟ್ ಬಾರ್ನ್’ ಕೃತಿಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪರಿಚಿತರಾದರು. ಬಳಿಕ ಉತ್ತಮ ಬರವಣಿಗೆ ಮೂಲಕ ಅಮೆರಿಕಾದಲ್ಲಿ ಸಾಹಿತ್ಯಾಸಕ್ತರ ಮನಗೆಲ್ಲುವಲ್ಲಿ ಗ್ಲುಕ್ ಅವರು ಯಶಸ್ವಿಯಾಗಿದ್ದರು.

Exit mobile version