ಅವಧಿಗೂ ಮುನ್ನವೇ ರಾಜ್ಯಕ್ಕೆ ಎಂಟ್ರಿಕೊಡಲಿರುವ ನೈರುತ್ಯ ಮುಂಗಾರು ಮಳೆ

ನೈಋತ್ಯ ಮುಂಗಾರು ಮಾರುತಗಳು ಅವಧಿಗೂ ಮುನ್ನ ಕೇರಳಕ್ಕೆ ಪ್ರವೇಶವಾಗಿವೆ. ಈ ಹಿನ್ನಲೆ ಇಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆಯೆಂದು ಹವಮಾನ ಇಲಾಖೆ ತಿಳಿಸಿದೆ. ನೆರೆಯ ರಾಜ್ಯ ಕೇರಳದಲ್ಲಿ ಮಾನ್ಸೂನ್ ಮಳೆ ಆರಂಭವಾಗಿದ್ದು ಈ ಬಾರಿ ಅವಧಿಗು ಮುನ್ನವೇ ಮುಂಗಾರು ಮಳೆ ಕರ್ನಾಟಕದಲ್ಲಿ ಪ್ರಾರಂಭವಾಗಲಿದೆ .

ಇನ್ನು ಈ ಬಾರಿ ಜೂನ್ 5 ರಂದು ದಕ್ಷಿಣ ರಾಜ್ಯಗಳಲ್ಲಿ ಮಳೆಗಾಲ ಶುರುವಾಗಲಿದ್ದು ; ಬಂಗಾಳಕೊಲ್ಲಿಯನ ಚಂಡಮಾರುತದಿಂದ ಮಾನ್ಸೂನ್ ಮಾರುತಗಳು ಜೂನ್ 1 ರಂದು ಕೇರಳ ಪ್ರವೇಶಿಸಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.ಈ ನಿಟ್ಟಿನಲ್ಲಿ ಕಳೆದ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ ಮಳೆಗಾಲ ತಡವಾಗಿ ಶುರುವಾಗಲಿದೆ.

ಮುಂಗಾರು ಮಳೆ ರೈತರಿಗೆ ಒಂದು ಕಡೆ ಖುಷಿ ತಂದರೆ, ಮತ್ತೊಂದೆಡೆ ಮಳೆಯಿಂದಾಗಿ ಯಾವ ಅನಾಹುತ ಆಗುತ್ತೋ ಎಂಬ ಆತಂಕ ಕೂಡ ಇದೆ. ಯಾಕೆಂದರೆ ಕಳೆದ ಕೆಲವು ವರ್ಷಗಳಿಂದ ರಾಜ್ಯಕ್ಕೆ ಮುಂಗಾರು ಭಾರೀ ಹೊಡೆತ ಕೊಟ್ಟಿದೆ. ಈ ಬಾರಿ ಮಳೆಯ ಆರ್ಭಟ ಹೇಗಿರುತ್ತದೆ ಎನ್ನುವ ಕುತೂಹಲದ ಲೆಕ್ಕಾಚಾರ ತಜ್ಞರದ್ದು. ಮೇ 28ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿದೆ.

ಈ ಹಿನ್ನಲೆ ಇಂದಿನಿಂದ ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು ಕೇರಳಕ್ಕೆ ಪ್ರವೇಶಿಸಿದ ನಾಲ್ಕನೇ ದಿನದ ಬಳಿಕ ಕರ್ನಾಟಕಕ್ಕೆ ಮುಂಗಾರು ಮಳೆ ತನ್ನ ಆಟ ಶುರುಮಾಡಲಿದೆ.ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ.

Exit mobile version