ಆರ್‌ಜಿವಿ ನಿರ್ದೇಶನದಲ್ಲಿ ಮರ್ಡರ್

ಮರ್ಡರ್ .. ಈ ಹೆಸರು ಪಕ್ಕಾ ಕ್ರೈಮ್ ಅನ್ನೋದು ಗೊತ್ತಾಗುತ್ತದೆ. ಇದೇ ಮರ್ಡರ್ ಅನ್ನೋ ಹೆಸರಿನ ಚಿತ್ರ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿತ್ತು .. ಜನರ ಮನಸ್ಸಲ್ಲಿ ಅದೆಷ್ಟೋ ಪ್ರಶ್ನೆಗಳನ್ನು ಮೂಡಿಸಿತ್ತು.ಹೌದು ಬಾಲಿವುಡ್ ರಂಗದಲ್ಲಿ ಮರ್ಡರ್ ಅನ್ನೋ ಚಿತ್ರದ ಮೂಲಕ ಇಮ್ರಾನ್ ಅಶ್ಮಿ ಮತ್ತು ಮಲ್ಲಿಕಾ ಶೆರಾವತ್ ತೆರೆಮೇಲೆ ಕಮಾಲ್ ಮಾಡಿದ್ರು . ಇದೇ ಚಿತ್ರ ಬಾಕ್ಸ್ ಆಫೀಸನ್ನು ಚಿಂದಿ ಉಡಾಯಿಸಿತ್ತು. ಇದೀಗ ಇದೇ ಹೆಸರಿನ ಮತ್ತೊಂದು ಸಿನಿಮಾ ತೆರೆಮೇಲೆ ಬರಲು ರೆಡಿಯಾಗಿದೆ . ಹೌದು ತೆಲುಗಿನಲ್ಲಿ ಮರ್ಡರ್ ಅನ್ನೋ ಸಿನಿಮಾ ರೆಡಿಯಾಗಿದ್ದು ಡಿ .೨೪ ರಂದು ತೆರೆಗೆ ಅಪ್ಪಳಿಸಲಿದೆ ..

ಅಂದಹಾಗೆ ಬಾಲಿವುಡ್ ಮರ್ಡರ್ ಚಿತ್ರಕ್ಕೂ ತೆಲುಗಿನಲ್ಲಿ ರೆಡಿಯಾಗಿರೋ ಮರ್ಡರ್ ಚಿತ್ರಕ್ಕೂ ಟೈಟಲ್ ವಿಷ್ಯ ಬಿಟ್ರೆ ಯಾವ ರೀತಿಲೂ ಲಿಂಕ್ ಇಲ್ವ ಅನ್ನೋದನ್ನು ಮರ್ಡರ್ ಚಿತ್ರದ ನಿರ್ದೇಶಕರು ಕನ್ಫಾಮ್ ಮಾಡಿದ್ದಾರೆ .ಮರ್ಡರ್ ಅನ್ನೋ ಚಿತ್ರವನ್ನು ಖ್ಯಾತ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದು ಚಿತ್ರದ ಬಗ್ಗೆ ಸಾಕಷ್ಟು ಕ್ಯೂರ್ಯಾಸಿಟಿಯನ್ನು ಹೆಚ್ಚಿಸಿದ್ದಾರೆ .ಮರ್ಡರ್ ಚಿತ್ರ ನಿಜ ಘಟನೆಯನ್ನಾದರಿಸಿದ ಸಿನಿಮಾವಾಗಿದ್ದು ತೆಲಂಗಾಣದಲ್ಲಿ ದೊಡ್ಡ ಸೌಂಡ್ ಮಾಡಿದ್ದ ಪ್ರಣಯ್ – ಅಮೃತಾ ಲವ್ ಕಹಾನಿಯ ಜೊತೆಗೆ ಮಯರ್ಯಾದೆ ಹತ್ಯೆಯನ್ನು ಇಟ್ಟಕೊಂಡು ಸ್ಟೋರಿ ರೆಡಿ ಮಾಡಿದ್ದಾರೆ ಆರ್ ಜಿ ವಿ .

ಅಮೃತಾ- ಪ್ರಣಯ್ ಪ್ರೀತಿಸಿ ಮದುವೆಯಾಗಿದ್ರು. ಇದು ಅಮೃತಾ ತಂದೆಗೆ ಇಷ್ಟವಿರಲಿಲ್ಲ. ೨೦೧೯ರ ಸ. ೧೪ ರಂದು ಅಮೃತಾ ಎದುರುಗಡೆ ಅಪರಿಚಿತ ವ್ಯಕ್ತಿಯೊಬ್ಬ ಪ್ರಣಯ್ ನನ್ನು ಕೊಲೆ ಮಾಡ್ತಾನೆ . ಈ ಕೊಲೆಗೆ ಸುಪಾರಿಯನ್ನು ಅಮೃತಾ ತಂದೆ ನೀಡಿರೋದು ಅನ್ನೋದು ಸಾಬೀತಾಗಿ ಕೊನೆಗೆ ಅಮೃತಾಳ ತಂದೆ ಜೈಲುಪಾಲಾಗಿದ್ದಲ್ಲದೆ . ಆತ್ಮಹತ್ಯೆಗು ಶರಣಾಗುತ್ತಾರೆ . ಇದೀಗ ಇದೇ ಕಥೆಯನ್ನು ಸಿನಿಪ್ರೇಕ್ಷಕರಿಗೆ ತೋರಿಸಲು ರಾಮ್ ಗೋಪಾಲ್ ವರ್ಮಾ ರೆಡಿಯಾಗಿದ್ದು ೪ ಭಾಷೆಗಳಲ್ಲಿ ಚಿತ್ರ ತೆರೆಕಾಣಲಿದೆ .. ಇನ್ನು ಕನ್ನಡದಲ್ಲಿ ಮರ್ಡರ್ ಚಿತ್ರ ಲಕ್ಷ್ಮೀ ವೃಷಾಭಾದ್ರಿ ಸಿನಿಮಾಸ್ ಮೂಲಕ ತೆರೆಕಾಣಲಿದೆ .ಒಟ್ಟಾರೆ ತೆಲಂಗಾಣವನ್ನೆ ಅಲುಗಾಡಿಸಿದ ಅಮೃತಾ ಪ್ರಣಯ್ ಲವ್ ಕಹಾನಿ ನಾಲ್ಕು ಭಾಷೆಗಳಲ್ಲಿ ತೆರೆಕಾಣೋದರ ಮೂಲಕ ಸಿನಿರಸಿಕರನ್ನು ಯಾವ ರೀತಿ ಆರ್ .ಜಿ ವಿ ಅಲುಗಾಡಿಸುತ್ತಾರೆ ಅನ್ನೋದನ್ನು ಕಾದುನೋಚಡಬೇಕಿದೆ

Exit mobile version