ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 12,2019-ಗುರುವಾರ

ಮೇಷ:- ಯಾಕೋ ಮನಸ್ಸಿಗೆ ತಳಮಳ ಎಂದುಕೊಂಡು ಸುಮ್ಮನೆ ಕುಳಿತುಕೊಳ್ಳದಿರಿ. ಧೈರ್ಯದಿಂದ ಮುನ್ನುಗ್ಗಿ, ಯಶಸ್ಸು ಸಿಗಲಿದೆ. ನಿಮ್ಮ ಆಂತರ್ಯದ ಒಳ ತುಮುಲಗಳನ್ನು ಸ್ನೇಹಿತರ ಮುಂದೆ ಇಲ್ಲವೆ ಹಿತೈಷಿಗಳ ಮುಂದೆ ತಿಳಿಸಿ.

ವೃಷಭ:- ಅನವಶ್ಯಕವಾಗಿ ಸಮಯ ಪೋಲು ಮಾಡಬೇಡಿ. ಕಳೆದುಕೊಂಡ ಹಣವನ್ನು ಮರಳಿ ಪಡೆಯಬಹುದು. ಆದರೆ ಕಳೆದುಕೊಂಡ ಸಮಯವನ್ನು ಪಡೆಯಲು ಆಗುವುದಿಲ್ಲ. ಯಾವುದಾದರೂ ಕೆಲಸಗಳನ್ನು ಹುಡುಕಿ ಮಾಡುತ್ತಾ ಚಟುವಟಿಕೆಯಿಂದ ಇರಿ.

ಮಿಥುನ:- ನೇರವಾಗಿರುವ ದಾರಿಯನ್ನು ಪ್ರವೇಶಿಸಬೇಕು ಎಂಬ ನಿರ್ಣಯ ಒಳ್ಳೆಯದೇ. ನೀವು ಹಾದಿ ತಪ್ಪುವ ಸಾಧ್ಯತೆ ಇದೆ. ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆ ಮಾಡಿ. ಒಳಿತಾಗುವುದು.

ಕಟಕ:- ಸರ್ವತ್ರ ಸರ್ವಕಾಲದಲ್ಲೂ ಇರುವ ಭಗವಂತನ ಅಸ್ತಿತ್ವದ ಬಗ್ಗೆ ಸಂಶಯ ಬೇಡ. ಆಶ್ಚರ್ಯಕರ ಘಟನೆಯೊಂದು ಪುನಃ ದೇವರ ಬಗೆಗಿನ ದೃಢಭಕ್ತಿಗೆ ಕಾರಣವಾಗುವುದು. ನಿಮ್ಮಿಂದ ಸಹಾಯ ಬಯಸಿ ಬರುವ ವ್ಯಕ್ತಿಗಳಿಗೆ ನಿರಾಶೆ ಮಾಡಬೇಡಿ.

ಸಿಂಹ:- ಬಹುವಾಗಿ ಪ್ರೀತಿಸುವವರು ಅಸಮಂಜಸ ವರ್ತನೆ ತೋರಬಹುದು. ಹಾಗಂತ ಅವರ ವಿರುದ್ಧ ಯುದ್ಧ ಸಾರುವುದು ಬೇಡ. ತಾಳ್ಮೆಯಿಂದ ಅವರೊಂದಿಗೆ ವರ್ತಿಸಿ. ಅವರು ತಪ್ಪನ್ನು ತಿದ್ದಿಕೊಳ್ಳುವರು ಮತ್ತು ನಿಮ್ಮೊಡನೆ ಸ್ನೇಹದಿಂದ ಇರುವರು.

ಕನ್ಯಾ:- ನೀವು ನಿರೀಕ್ಷಿಸಿದ ಪ್ರಮಾಣದಲ್ಲಿಲಾಭ ಕೈಸೇರಲಿದೆ. ತಪ್ಪದೇ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭೂವರಾಹ ಸ್ವಾಮಿ ದರ್ಶನ ಪಡೆಯಿರಿ.

ತುಲಾ:- ಎಲ್ಲವೂ ದಿಢೀರನೇ ಆಗಿಬಿಡಬೇಕೆಂಬ ನಿಮ್ಮ ಮನೋಭಾವನೆ ಸಹಜವಾದುದು. ಆದರೆ ಅದು ಅಷ್ಟು ಬೇಗ ಆಗಲು ನಿಮ್ಮ ಪೂರ್ವತಯಾರಿಯೂ ಅಷ್ಟೇ ಮುಖ್ಯ ಎಂಬುದನ್ನು ಮರೆಯದಿರಿ. ಮನೋವೇಗಿಯಾದ ಆಂಜನೇಯ ಸ್ವಾಮಿ ಮಂತ್ರ ಪಠಿಸಿ.

ವೃಶ್ಚಿಕ:- ಯಶಸ್ಸಿನ ದಾರಿ ಸುಲಭವಾಗಿದೆ ಎಂದು ಅನಿಸಿದರೂ ನಿಷ್ಠೆಯಿಂದ ಕಾರ್ಯ ಹಮ್ಮಿಕೊಂಡಲ್ಲಿಮಾತ್ರ ಯಶಸ್ಸು ಹೊಂದಬಹುದು. ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ಧನುಸ್ಸು:- ನಿಮ್ಮದು ಗಡಿಬಿಡಿಯ ಸ್ವಭಾವ. ತಾಳ್ಮೆಯಿಂದ ಎದುರಿಗೆ ಇರುವವರನ್ನು ನಿಮ್ಮ ಬೆಂಬಲಕ್ಕೆ ಪರಿವರ್ತಿಸಿಕೊಳ್ಳಿ. ಯಾರಿಂದ ನನಗೇನೂ ಆಗಬೇಕಿಲ್ಲಎಂಬ ಹುಂಬತನ ತೋರದಿರಿ. ಆದಷ್ಟು ಸಮಾಜಮುಖಿಯಾಗಿ ಚಿಂತಿಸಿ.

ಮಕರ:– ನಿಮ್ಮ ಲೆಕ್ಕಾಚಾರಗಳು ಪಕ್ಕಾ ಆಗಲಿವೆ. ಬೃಹತ್‌ ಯೋಜನೆಯು ಅನ್ಯರ ಹಣಕಾಸಿನ ನೆರವಿನಿಂದ ಸುಗಮವಾಗುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳು ದೊರೆಯುವುದರಿಂದ ಮಾನಸಿಕ ನೆಮ್ಮದಿ ಸಿಗುವುದು.

ಕುಂಭ:- ಅಸಾಧ್ಯವೆನಿಸಿದ್ದ ಕೆಲ ಕೆಲಸಗಳು ಆಶ್ಚರ್ಯಕರ ರೀತಿಯಲ್ಲಿ ಅನಿರೀಕ್ಷಿತವಾಗಿ ಕೈಗೂಡಲಿವೆ. ವಾಹನ, ಆಸ್ತಿ ಖರೀದಿಯ ಯೋಗವಿದೆ. ಒತ್ತಡದ ವಾತಾವರಣದಲ್ಲಿಕೆಲಸ ಮಾಡುವುದು ಅಷ್ಟು ಉತ್ತಮವಲ್ಲ.

ಮೀನ:- ಬಿರುಗಾಳಿ ಬೀಸುವ ಎಲ್ಲಾಲಕ್ಷಣಗಳು ಇವೆ. ಗಾಳಿ ಬಂದಾಗ ತೂರಿಕೊಳ್ಳಿ ಎನ್ನುವಂತೆ ಷೇರು ಬಜಾರಿನಲ್ಲಿನ ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳಿ. ಮಕ್ಕಳೊಂದಿಗೆ ಸ್ನೇಹಭಾವದಿಂದ ವರ್ತಿಸಿ.

Exit mobile version