ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ನವೆಂಬರ್ 8,2019- ಶುಕ್ರವಾರ

ಮೇಷ:- ನಿಮ್ಮ ಕಾರ್ಯಗಳಲ್ಲಿನ ಅನವಶ್ಯಕವಾದ ವಿಳಂಬದಿಂದಾಗಿ ಹಲವಾರು ಬಗೆಯ ತಳಮಳಗಳು ಎದುರಾಗುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಆರಾಧನೆಯಿಂದ ಒಳಿತಾಗುವುದು. ಸಂಜೆಯ ವೇಳೆಗೆ ಕಾರ್ಯ ಕೈಗೂಡುವುದು. 

ವೃಷಭ:- ಅನೇಕರು ನೀಡುವಂತಹ ಸಲಹೆಗಳನ್ನು ತಾಳ್ಮೆಯಿಂದ ಸ್ವೀಕರಿಸಿ. ನಿಶ್ಚಿತವಾದ ಯಶಸ್ಸು ಸರಳವಾಗಿ ಸಿಗಲಿದೆ. ವಿವಿಧ ಮೂಲಗಳಿಂದ ಹಣಕಾಸು ಬರುವುದು. ಮಕ್ಕಳ ಪ್ರಗತಿಯು ನಿಮ್ಮ ಸಂತೋಷಕ್ಕೆ ಕಾರಣವಾಗುವುದು. 

ಮಿಥುನ:- ಧನಲಾಭದ ವಿಚಾರದಲ್ಲಿ ಅದೃಷ್ಟದ ದಿನ. ನೀವಾಡುವ ಮಾತುಕತೆಯು ಫಲಪ್ರದದ ಸಂಕೇತವಾಗಿರುವುದರಿಂದ ಹೇರಳ ಧನಾಗಮವಿದೆ. ಸಂಗಾತಿಯ ಎಚ್ಚರಿಕೆಯ ಮಾತುಗಳನ್ನು ಸ್ವೀಕರಿಸಿದಲ್ಲಿ ಬರುವ ಹಣವು ಖರ್ಚಾಗದೆ ಉಳಿದುಕೊಳ್ಳುವುದು. 

ಕಟಕ:- ಕೆಂಪು ದಾಸವಾಳದಿಂದ ದೇವಿಯನ್ನು ಅರ್ಚಿಸಿ, ಮನೋಕಾಮನೆಗಳನ್ನು ಪೂರ್ಣಗೊಳಿಸಿಕೊಳ್ಳಿ. ಇಲ್ಲವೆ ಐದು ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಸಿಹಿ ನೀಡುವ ಮೂಲಕ ದೇವಿ ಅನುಗ್ರಹವನ್ನು ಪಡೆಯಿರಿ. ನಿಮ್ಮ ಕಾರ್ಯ ಸಾಧನೆಗಾಗಿ ಒಂದೊತ್ತು ಆಹಾರ ಸೇವಿಸಿ. 

ಸಿಂಹ:- ನಿಮ್ಮ ಕೆಲವು ಲೆಕ್ಕಾಚಾರಗಳು ಸೋಲಬಹುದಾದರೂ ಸೋತಂತೆ ನಟಿಸಿ ಗೆಲ್ಲುವುದು ಕ್ಷೇಮ. ಹಾಗಾಗಿ ಸೋತೆ ಎಂದು ಮರುಗದಿರಿ. ಅದು ನಾಳಿನ ಗೆಲುವಿನ ಸೋಪಾನವಾಗುವುದು. ಶ್ರೀ ಲಕ್ಷಿತ್ರ್ಮೕದೇವಿಯನ್ನು ಆರಾಧಿಸಿ. 

ಕನ್ಯಾ:- ಮನುಜ ಸಂಘಜೀವಿ. ಸಮಾಜದ ಎಲ್ಲರೊಡನೆ ಸ್ನೇಹ ಬಾಂಧವ್ಯವನ್ನು ವೃದ್ಧಿಸಿಕೊಳ್ಳಿ. ನಿಮ್ಮ ನೆರೆಹೊರೆಯ ಜನರನ್ನು ಪ್ರೀತಿಸಿ, ಆರಾಧಿಸಿ. ಅವರ ಕಷ್ಟಗಳಿಗೆ ಸ್ಪಂದಿಸಿ. ಇದರಿಂದ ನಿಮ್ಮ ಮನಸ್ಸಿಗೂ ನೆಮ್ಮದಿ ದೊರೆಯುವುದು. 

ತುಲಾ:- ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎಂಬಂತೆ ಅನನ್ಯವಾಗಿ ಗುರುವಿನ ಮಂತ್ರ ಪಠಿಸಿ. ಗುರು, ಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಸಂಕಷ್ಟಗಳು ದೂರವಾಗುವುವು. 

ವೃಶ್ಚಿಕ:- ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡುವುದು ಒಳ್ಳೆಯದು. ನಿಮ್ಮ ಪ್ರಗತಿಯನ್ನು ಕಂಡು ಕರುಬುವವರ ಸಂಖ್ಯೆ ಹೆಚ್ಚಾಗುತ್ತಿರುವುದು. ನೀವು ಮಾಡುವ ಸಣ್ಣ ತಪ್ಪನ್ನೇ ಭೂತ ಕನ್ನಡಿಯಲ್ಲಿ ತೋರಿಸಿ ಗಹಗಹನೆ ನಗುವ ಗುಂಪಿನ ಬಗ್ಗೆ ಎಚ್ಚರವಿರಲಿ. 

ಧನುಸ್ಸು:- ನಿಮ್ಮನ್ನು ಯಾರು ಆಧರಿಸಿ ಗೌರವದಿಂದ ಕಾಣುವರೋ ಅಂತಹವರ ಸಖ್ಯವನ್ನು ಬೆಳೆಸಿ. ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕಾಡುವ ಸಾಧ್ಯತೆ ಇದ್ದು ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿತಿ. ನೀವೇ ಸ್ವಯಂ ವೈದ್ಯರಾಗದಿರಿ. 

ಮಕರ:- ದೂರ ದೇಶದ ಪ್ರಯಾಣ ನಿಗದಿ ಆಗಬಹುದು. ಅದಕ್ಕಾಗಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಆಂಜನೇಯ ಸ್ವಾಮಿ ಮಂತ್ರವನ್ನು ಪಠಿಸಿ ಮತ್ತು ಬಡವರಿಗೆ ಆಹಾರ ನೀಡಿ. 

ಕುಂಭ:- ನಿರ್ದಿಷ್ಟವಾದ ಖರ್ಚನ್ನು ಶಿಸ್ತಿನಿಂದ ರೂಪಿಸಿಕೊಳ್ಳಿ. ಮನದ ಉತ್ತಮ ಸಂಕಲ್ಪಕ್ಕೆ ಗೆಲುವು ದೊರೆಯಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದು. ಸಹೋದರರ ಸಂಗಡ ಉತ್ತಮ ಬಾಂಧವ್ಯ ಏರ್ಪಡುವುದು. 

ಮೀನ:- ಅನೇಕ ಹೊಣೆಗಾರಿಕೆಗಳ ಕಾರಣದಿಂದ ಏಕಕಾಲಕ್ಕೆ ಒತ್ತಡಗಳು ಆವರಿಸಿಕೊಳ್ಳುವುವು. ಮನೋನಿಯಾಮಕ ರುದ್ರದೇವರನ್ನು ಸ್ಮರಿಸಿಕೊಳ್ಳಿ. ಅವಶ್ಯಕತೆಗೆ ತಕ್ಕಷ್ಟು ಹಣ ಖರ್ಚು ಮಾಡಿ. ಒಳಿತಾಗುವುದು. 

Exit mobile version