ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ನವೆಂಬರ್ 15,2019 ಶುಕ್ರವಾರ

ಮೇಷ:- ನಿಮ್ಮ ಶಕ್ತಿಯ ವಿಚಾರದಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ನಿಮ್ಮ ಸರಳತೆಯ ಜೀವನದಿಂದ ನೀವು ಪರರಿಗೆ ಮಾರ್ಗಸೂಚಕರಾಗುವಿರಿ. ನಾಯಕತ್ವದ ಗುಣಗಳನ್ನು ಕಂಡು ಜನ ನಿಮ್ಮ ಸುತ್ತ ತಿರುಗುವರು. 

ವೃಷಭ:– ಮಾತಾ ದುರ್ಗಾದೇವಿಯ ಪ್ರಾರ್ಥನೆಯಿಂದ ಸಕಲ ದುರಿತಗಳು ನಾಶವಾಗುವುವು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಕೆಮ್ಮು, ಕಫದಂಥ ತೊಂದರೆಗಳು ಕಾಡುವ ಸಾಧ್ಯತೆ ಇದ್ದು , ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. 

ಮಿಥುನ:- ಕೊರತೆಯಲ್ಲಿನ ಹಣಕಾಸಿನ ವೃದ್ಧಿಗೆ ಒಂಟಿ ಹೋರಾಟ ಬೇಡ. ಎಲ್ಲಾ ವಿಚಾರದಲ್ಲೂ ಬಾಳಸಂಗಾತಿಯ ಸಹಕಾರ ಪಡೆದು ಮುಂದುವರಿಯಿರಿ. ಕೆಲವು ವಿಷಯಗಳಲ್ಲಿ ಸಂಗಾತಿಯ ತೀರ್ಮಾನವೇ ಅಂತ್ಯವಾಗುವುದು. 

ಕಟಕ:- ನಿಮ್ಮ ಪ್ರತಿಭಾವಂತಿಕೆಯನ್ನು ಸಕಾರಾತ್ಮಕವಾಗಿ ನಿರೂಪಿಸಿ ಯಶಸ್ಸು ಗಳಿಸಲು ಸೂಕ್ತ ಸಮಯವಾಗಿದೆ. ಆಕಸ್ಮಿಕವಾಗಿ ಹಣಕಾಸು ಬರುವುದು. ಮಕ್ಕಳು ವಿದ್ಯಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣುವರು. 

ಸಿಂಹ:- ಆಪ್ತ ಗೆಳೆಯನ ಭೇಟಿ ಸಾಧ್ಯತೆ ಇದೆ. ಆತನ ಕರುಣಾಜನಕ ಕಥೆ ಕೇಳಿ ಮನಸ್ಸು ಮರುಗುವುದು. ಆತನಿಗೆ ನಿಮ್ಮಿಂದ ಸಹಾಯ ಬೇಕಾಗಿರುತ್ತದೆ. ನಿಸ್ವಾರ್ಥದಿಂದ ಆತನಿಗೆ ಸಹಾಯ ಹಸ್ತ ನೀಡಿ. ಮುಂದೆ ಆತನಿಂದ ಅನುಕೂಲವಾಗುವುದು. 

ಕನ್ಯಾ:- ವ್ಯಾಜ್ಯದ ವಿಚಾರದಲ್ಲಿ ಸೋತು ಗೆಲ್ಲುವ ಯೋಚನೆ ಇರಲಿ. ಮುಂದಿನ ದಾರಿ ಯಶಸ್ಸಿಗೆ ಮುಖ ಮಾಡಲಿದೆ. ಮುಷ್ಠಿಕಾಳು ಚೆಲ್ಲಿಮೂಟೆ ಕಾಳು ಬಾಚುವಂತೆ ಕೆಲವು ವಿಚಾರಗಳಲ್ಲಿ ಯಶಸ್ಸನ್ನು ಹೊಂದಲು ಹಣವನ್ನು ಚೆಲ್ಲುವುದು ಅನಿವಾರ್ಯವಾಗಲಿದೆ. 

ತುಲಾ:- ವ್ಯಾಪಾರ, ವ್ಯವಹಾರದಲ್ಲಿ ಮುಂದಾಲೋಚನೆಯಿಲ್ಲದೆ ಹಣ ಹೂಡಿದ ಪರಿಣಾಮ ವ್ಯಾಪಾರದಲ್ಲಿ ನಷ್ಟ ಎದುರಿಸುವಿರಿ. ನಷ್ಟ ಸರಿದೂಗಿಸಲು ಸಾಲ ಮಾಡಬೇಕಾದ ಪ್ರಸಂಗ ಬರಲಿದೆ. ಆದರೆ ಈಗಾಗಲೇ ಮಾಡಿರುವ ಸಾಲವೇ ಬಹಳಷ್ಟು ಇರುವಾಗ ನಿಮಗೆ ಬೇರೆಯವರು ಸಾಲ ನೀಡಲಾರರು. 

ವೃಶ್ಚಿಕ:- ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಜನ್ಮಶನಿಯಿಂದ ಬಿಡುಗಡೆ ಆಗಿದ್ದರೂ ಕಾಡಾಟ ಇದ್ದೇ ಇರುತ್ತದೆ. ಹಾಗಾಗಿ ಮಹತ್ತರ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡುವುದು ಒಳಿತು. ಹಣ ಉಳಿತಾಯ ಮಾಡಲಾಗುವುದಿಲ್ಲ. 

ಧನುಸ್ಸು:– ನಿಮ್ಮ ಜೀವನದಲ್ಲಿ ಪರರನ್ನು ಹೋಲಿಸಿಕೊಂಡು ಖಿನ್ನರಾಗದಿರಿ. ಭಗವಂತ ಪ್ರತಿಯೊಬ್ಬರಿಗೂ ತನ್ನದೇ ಆದ ಒಂದು ವ್ಯಕ್ತಿತ್ವವನ್ನು ನೀಡಿರುವನು. ಆ ಪ್ರತ್ಯೇಕತೆಯ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಲ್ಪಡುವಿರಿ. ಹಣಕಾಸಿನ ಸ್ಥಿತಿ ಸಾಧಾರಣವಾಗಿರುತ್ತದೆ. 

ಮಕರ:- ತಾಯಿಗಿಂತ ದೇವರಿಲ್ಲ. ಶಕ್ತಿದೇವಿಯ ಆರಾಧನೆಗೆ ಒಳ್ಳೆಯ ದಿನ. ಹಾಗಾಗಿ ಶಕ್ತಿದೇವಿಯನ್ನು ಅನನ್ಯವಾಗಿ ಭಜಿಸಿ. ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಿ. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. 

ಕುಂಭ:- ಹಣಕಾಸಿನ ಮುಗ್ಗಟ್ಟನ್ನು ಅನುಭವಿಸುವಿರಿ. ಆದರೆ ಸಕಾಲದಲ್ಲಿ ನೆಂಟರ ಅಥವಾ ಸ್ನೇಹಿತರಿಂದ ಸಹಕಾರ ದೊರೆಯುವುದು. ಹಾಗಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ತಪ್ಪದೇ ವಿಷ್ಣುಸಹಸ್ರನಾಮ ಪಠಿಸಿ. 

ಮೀನ:- ನಿಮ್ಮ ಜೀವನದ ಶಿಲ್ಪಿ ನೀವೇ. ನಿಮ್ಮನ್ನು ಇತರರು ಉದ್ಧರಿಸುತ್ತಾರೆ ಎಂದು ತಿಳಿದು ಕಾರ್ಯದಿಂದ ಹಿಂದೆ ಸರಿಯಬೇಡಿ. ಮುನ್ನುಗ್ಗಿ ಪ್ರವೃತ್ತರಾದಲ್ಲಿ ದೈವಕೃಪೆಯಿಂದ ಇಚ್ಛಿತ ಗುರಿಯನ್ನು ತಲುಪುವಿರಿ. 

Exit mobile version