ಈ ದಿನ ಯಾವ ರಾಶಿಯ ಭವಿಷ್ಯ ಹೇಗಿದೆ..? ಸೆಪ್ಟೆಂಬರ್ 5, 2019-ಗುರುವಾರ

ಮೇಷ :- ನಿಮ್ಮದೇ ಆದ ವರ್ಚಸನ್ನು ವೃದ್ಧಿಸಿಕೊಳ್ಳಲು ನಿಮ್ಮ ಸಮಯಾವಧಾನ ಮತ್ತು ಮಾತಿನ ಶಕ್ತಿಯಿಂದ ಯಶಸ್ವಿಯಾಗುವಿರಿ. ನಿಮ್ಮ ಮನಸ್ಸು ಪ್ರಫುಲ್ಲತೆಯಿಂದ ಕೂಡಿರುವುದು. ನಿಮ್ಮ ಸ್ನೇಹಿತರು, ಬಂಧುಗಳು ನಿಮ್ಮನ್ನು ಆದರಿಸುವರು. 

ವೃಷಭ :- ವಿಶೇಷ ಶಕ್ತಿಯ ಜನರನ್ನು ಸಂಧಿಧಿಸುವುದರಿಂದ ಹಲವನ್ನು ತಿಳಿಯುವ, ಬಯಸುವ ಕೆಲಸವನ್ನು ಸಫಲಗೊಳಿಸುವ ಸಿದ್ಧಿ ನಿಮಗೆ ಕರಗತವಾಗಲಿದೆ. ಮಕ್ಕಳು ತಮ್ಮ ಪ್ರಗತಿಯಿಂದ ನಿಮಗೆ ಖುಷಿ ಹಂಚುವರು.

ಮಿಥುನ :– ಪ್ರತಿಯೊಂದು ಕಾರ್ಯಗಳಲ್ಲಿಅಡೆತಡೆಗಳು ಎದುರಾಗುತ್ತವೆ ಎಂದು ಭಾವಿಸಬೇಡಿ. ಇಂದಿನ ಸೋಲು ನಾಳಿನ ಗೆಲುವಿಗೆ ಕಾರಣವಾಗುವುದು. ಹಣಕಾಸಿನ ಸ್ಥಿತಿ ಸಾಧಾರಣವಿದ್ದು, ಅನಗತ್ಯ ಖರ್ಚು, ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. 

ಕಟಕ :- ಧನಲಾಭದ ಬಗೆಗಿನ ಅನೇಕ ವಹಿವಾಟಿನ ವಿಚಾರಗಳು ನಿಮ್ಮ ಪಕ್ವತೆಯಿಂದಾಗಿ ಸಫಲತೆ ಹೊಂದುವುದು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುವುದು. 

ಸಿಂಹ :- ನಿಮ್ಮ ಅಂತರಂಗದ ವಿಚಾರಗಳನ್ನು ಬಲ್ಲಸ್ನೇಹಿತರು ನಿಮ್ಮನ್ನು ಬ್ಲಾಕ್‌ಮೇಲ್‌ ಮಾಡುವ ಸಂದರ್ಭವಿದೆ. ಹಾಗಾಗಿ ನೀವು ಮಾತನಾಡುವಾಗ ಎಚ್ಚರಿಕೆಯಿಂದ ಇರಿ. ನಿಮ್ಮ ಸ್ಥಾನಕ್ಕೆ ತಕ್ಕಂತೆ ಇತರರೊಡನೆ ವ್ಯವಹರಿಸುವುದು ಒಳ್ಳೆಯದು. 

ಕನ್ಯಾ :– ನನಗೆಲ್ಲ ತಿಳಿದಿದೆ ಎನ್ನುವುದು ಅಹಂಕಾರದ ಮಾತು. ಜಗತ್ತಿನಲ್ಲಿಯಾರೂ ಪರಿಪೂರ್ಣರಲ್ಲ. ಒಬ್ಬರು ಹೆಚ್ಚು ತಿಳಿದಿರುವರು ಎಂದ ಮಾತ್ರಕ್ಕೆ ಅವರೇನೂ ಸರ್ವಜ್ಞರಲ್ಲ. ಅಂತೆಯೇ ನೀವು ಕಲಿಯುವುದು ಬಹಳಷ್ಟು ಇದೆ ಎಂಬ ಅರಿವನ್ನು ಇಟ್ಟುಕೊಂಡು ವ್ಯವಹರಿಸಿ. ಒಳಿತಾಗುವುದು. 

ತುಲಾ :- ನಿಮಗೆ ಒದಗಿದ ಸಂಕಷ್ಟಗಳು ಮಂಜಿನಂತೆ ಕರಗಿ ನೀರಾಗುವುದು. ನಿಮ್ಮ ಸಮಸ್ಯೆಗೆ ಕುಟುಂಬ ವರ್ಗದ ಸದಸ್ಯರು, ವಿದೇಶದಿಂದ ಬರುವ ಬಂಧುಗಳು ಪರಿಹಾರ ನೀಡಬಲ್ಲರು. ಹಣಕಾಸಿನ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸುವುದು. 

ವೃಶ್ಚಿಕ :– ಪ್ರತಿ ಕ್ಷಣದಲ್ಲೂಕಾರ್ಮೋಡಗಳು ಆವರಿಸಿ ನಿಮ್ಮನ್ನು ಭಯಕ್ಕೆ ತಳ್ಳುತ್ತವೆಯಾದ್ದರಿಂದ ನಿಮಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಆದರೆ ಈ ಬಗ್ಗೆ ಗಾಬರಿಬೇಡ. ರಾತ್ರಿ ಕಳೆದು ಹಗಲು ಉಂಟಾಗುವಂತೆ ನಿಮ್ಮ ಬಾಳಿನಲ್ಲೂಬೆಳಕು ಮೂಡುವುದು. 

ಧನುಸ್ಸು :– ನಿಮ್ಮ ವೈಫಲ್ಯಗಳಿಗೆ ಅನ್ಯರು ಹೊಣೆಗಾರರು ಎನ್ನದೆ ನೀವೇ ಸೂಕ್ತವಾದ ಹೆಜ್ಜೆ ಇರಿಸಿ. ಇದರಿಂದ ದಾರಿ ನಿರಾಳವಾಗುವುದು. ದಶರಥಕೃತ ಶನಿಯ ಪ್ರಾರ್ಥನೆ ಮಾಡಿ. ಭಿಕ್ಷುಕರಿಗೆ ಚಿತ್ರಾನ್ನ ನೀಡಿ. 

ಮಕರ :- ವಿವಿಧ ಮೂಲಗಳಿಂದ ಹಣಕಾಸು ಬರುವುದು. ಅಂತೆಯೇ ಖರ್ಚಿನ ಮೂಲಗಳು ದಾರಿ ತೆರೆದುಕೊಳ್ಳುವುದರಿಂದ ಉಳಿತಾಯಕ್ಕೆ ಸಂಚಕಾರ ಬರುವುದು. ಹಾಗಾಗಿ ಮುನ್ನೆಚ್ಚರಿಕೆಯಿಂದ ಹಣವನ್ನು ಖರ್ಚುಮಾಡಿ. 

ಕುಂಭ :- ಸಕಾರಾತ್ಮಕ ಚಿಂತನೆಗಳಿಂದ ನೀವು ಮೇಲ್ಮಟ್ಟದಲ್ಲಿ ಬೆಳೆದಿರುವಿರಿ. ಮಕ್ಕಳ ಬಗೆಗಿನ ವಿಚಾರಗಳು ಮನಸ್ಸಿಗೆ ಸಂತೋಷವನ್ನುಂಟು ಮಾಡುವುವು. ಬರಬೇಕಾಗಿದ್ದ ಹಣಕಾಸು ಬರುವುದು. 

ಮೀನ :- ಭಕ್ತರ ಕಾಪಾಡುವ ಶಿವನನ್ನು ಅನನ್ಯ ಭಕ್ತಿಯಿಂದ ಪೂಜಿಸಿ. ಜೀವನವನ್ನು ಹೇಗೆ ಎದುರಿಸಬೇಕೆಂದು ಉತ್ತಮ ಸಲಹೆಗಳ ಮೂಲಕ ತೋರಿಸುವನು. ಮಕ್ಕಳ ಪ್ರಗತಿಯು ನಿಮಗೆ ಹೆಚ್ಚಿನ ಸಂತೋಷ ನೀಡುತ್ತದೆ. 

Exit mobile version