ಈ ವರ್ಷವನ್ನು ಪರೀಕ್ಷೆ ರಹಿತ ವರ್ಷ ಘೋಷಿಸಿ: ಶೋಭಾ ಆಗ್ರಹ

ಚಿಕ್ಕಮಂಗಳೂರು, ಅ 9: ದೇಶದಲ್ಲಿ ಕೊರೋನಾ  ಹೆಚ್ಚುತ್ತಿದ್ದು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಪರೀಕ್ಷಾ ರಹಿತ ವರ್ಷವೆಂದು ಘೋಷಿಸಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ  ಸರ್ಕಾರವನ್ನು ಒತ್ತಾಯಿಸಿದ್ದಾರೆ. 2020 ಜೀವ ಉಳಿಸುವ ವರ್ಷವಾಗಿದೆ, ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ನಡೆಸೋಣ ಎಂದು ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ಮೊದಲು ಜೀವ ಉಳಿಸೋಣ, ಆಮೇಲೆ ಜೀವನ ಮಾಡೋಣವೆಂದು ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ.

ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆ ಆರಂಭ ಮಾಡುವುದು ಬೇಡ. ಆನ್ಲೈನ್ ಕ್ಲಾಸ್ ಮುಂದುವರಿಯಲಿ. ರಾಜ್ಯ ಸೇರಿದಂತೆ ದೇಶಾದ್ಯಂತ ಅನೇಕ ಶಿಕ್ಷಕರ ಸಾವು ಸಂಭವಿಸಿದೆ. ಶಿಕ್ಷಕರು ದೇಶದ ಆಸ್ತಿ. ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿಲ್ಲ.

ಮಕ್ಕಳನ್ನು ಯಾವುದೇ ಪೋಷಕರು ಕಾಯಿಲೆ ಅಥವಾ ಸಮಸ್ಯೆಗೆ ದೂಡುವ ಮನಸ್ಥಿತಿಯಲ್ಲಿಲ್ಲ ಎಂದರು. ರಾಜ್ಯ ಸರ್ಕಾರ ಶಿಕ್ಷಕರ ಬಗ್ಗೆಯೂ ಕಾಳಜಿ ವಹಿಸಬೇಕು, ಶಿಕ್ಷಕರ ರಕ್ಷಣೆ, ಹಾಗೂ ಜೀವ ಉಳಿಸಲು ಆಧ್ಯತೆ ನೀಡಬೇಕು ಎಂದು ಹೇಳಿದ್ದಾರೆ.

Exit mobile version