ಉಚಿತ ಲಸಿಕೆ ಕೊಡುತ್ತೇವೆ ಎಂದರೆ ತಪ್ಪೇನಿದೆ: ಸಿ.ಟಿ.ರವಿ

ಚಿಕ್ಕಮಗಳೂರು, ಅ. 23: ಪ್ರಾಣ ಉಳಿಸಲು ಸಹಾಯವಾಗುವ ಕಾರ್ಯಕ್ಕೆ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಸಚಿವ ಸಿ.ಟಿ ರವಿ ಹೇಳಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಉಚಿತ ಅಕ್ಕಿ, ಲ್ಯಾಪ್‌ ಟಾಪ್‌‌ ನೀಡುತ್ತೇವೆ ಎನ್ನುತ್ತಾರೆ. ಹಾಗಾದರೆ ಪ್ರಣಾಳಿಕೆಯಲ್ಲಿ ಉಚಿತವಾಗಿ ಲಸಿಕೆ ನೀಡುತ್ತೇವೆ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಬಿಹಾರ ಚುನಾವಣೆಯ ಪ್ರಣಾಳಿಕೆಯಲ್ಲಿ ಉಚಿತವಾಗಿ ಕೊರೊನಾ ಲಸಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಾಣ ಉಳಿಸುವಂತ ಕಾರ್ಯಕ್ಕೆ ಉಚಿತವಾಗಿ ನೀಡುತ್ತೇವೆ ಎಂದು ಹೇಳಿವುದರಲ್ಲಿ ತಪ್ಪೇನಿದೆ. ಬಿಹಾರದಲ್ಲಿ ಉಚಿತವಾಗಿ ಕೊರೊನಾ ಲಸಿಕೆ ನೀಡುತ್ತೇವೆ ಎಂದಿದ್ದೇವೆ.

ಲಸಿಕೆ ದೊರೆತಾಗ ಉಚಿತವಾಗಿ ನೀಡುವ ವ್ಯವಸ್ಥೆ ಕೈಗೊಳ್ಳುತ್ತೇವೆ ಎಂದರು. ಜಗತ್ತಿನ ದೊಡ್ಡ ಇನ್ಸುರೆನ್ಸ್‌ ಯೋಜನೆ ಎಂದರೆ ಅದು ಆಯುಷ್ಮಾನ್‌ ಭಾರತ್‌ ಯೋಜನೆ. ಹಾಗಾಗಿ, ನಾವು ಹೇಳಿದಂತೆ ಮಾಡುತ್ತಿದ್ದೇವೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

Exit mobile version