ಎಸಿಬಿ ಕಚೇರಿಗೂ ಕಂಟಕವಾದ ಕೊರೋನಾ

ಎಸಿಬಿ ಕಚೇರಿಗೂ ಕೊರೋನಾ ಕಾಲಿಟ್ಟಿದೆ.. ಎಸಿಬಿಯ ಡಿವೈಎಸ್ ಒಬ್ಬರಿಗೆ ಗುರುವಾರ ಕೊರೋನಾ ಸೋಂಕು ದೃಢಪಟ್ಟಿರೋ ವರದಿಯಾಗಿದೆ. ಈ ಹಿನ್ನೆಲೆ ಸದ್ಯ  ಇಡೀ  ಎಸಿಬಿ  ಕಚೇರಿಯನ್ನು  ಬಿಬಿಎಂಪಿ ಸ್ಯಾನಿಟೈಸ್ ಮಾಡಿದ್ದಾರೆ.

 ಸ್ಯಾನಿಟೈಸ್ ಬಳಿಕ  ಎಸಿಬಿ ಕಚೇರಿಯನ್ನು ೪೮ ಗಂಟೆಗಳ ಕಾಲ ತಾತ್ಕಾಲಿಕ ಸೀಲ್ ಡೌನ್ ಮಾಡಲಾಗಿದೆ. ಜೊತೆಗೆ ಸದ್ಯ ಡಿವೈಎಸ್ಪಿ  ಸಂಪರ್ಕದಲ್ಲಿರೋರನ್ನು  ಬಿಬಿಎಂಪಿ ಪತ್ತೆ ಮಾಡುತ್ತಿದೆ.  ಈ ಹಿಂದೆಯೂ ಎಸಿಬಿಯಲ್ಲಿ  ಓರ್ವ ಅಧಿಕಾರಿಗೆ ಕೊರೋನಾ ಬಂದಿತ್ತು.

ರಾಜ್ಯದಲ್ಲಿ ಕೊರೋನಾ ಸೋಂಕು ಜಾಸ್ತಿಯಾಗ್ತಿದೆ. ಕಮ್ಯುನಿಟಿ ಸ್ಪ್ರೆಡ್ ಮೂಲಕ ವೈರಸ್ ಹೆಚ್ಚು ಹರಡುತ್ತಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ .ಇದರ ಬೆನ್ನಲೆ ಇದೀಗ ನಗರದ ಎಸಿಬಿ ಕಚೇರಿಗೂ ಕೊರೋನಾ ಕಂಟಕ ಎದುರಾಗಿದ್ದು ; ಮತ್ತಷ್ಟು ಆತಂಕ ಮನೆಮಾಡಿದೆ.

Exit mobile version