ಐವರು ಪೊಲೀಸರಿಗೆ ಕೊರೋನಾ ಪಾಸಿಟಿವ್

ಕೊರೋನಾ ಮಹಾಮಾರಿ ಜನರ ಜೊತೆ ಚೆಲ್ಲಾಟವಾಡ್ತಾ ಇದೆ. ಇತ್ತ ಜನರನ್ನು ರಕ್ಷಣೆ ಮಾಡೋ ಆರಕ್ಷಕರಿಗೂ ಕೊರೋನಾ ರೋಗ ಅಂಟಿಕೊಂಡಿದೆ. ರಾಜ್ಯದಲ್ಲಿ ಸತತವಾಗಿ ಪೊಲೀಸರಿಗೆ  ಕೊರೋನಾ ಪಾಸಿಟಿವ್ ಪತ್ತೆಯಾಗ್ತಿದೆ.

ಬುಧವಾರ ನಗರದಲ್ಲಿ ೫ ಪೊಲೀಸರಿಗೆ ಸೋಂಕು ಕಾಣಿಸಿಕೊಂಡಿದ್ದು  ಈವರೆಗೆ ಬೆಂಗಳೂರಿನಲ್ಲಿ ೪೧೬ ಪೊಲೀಸರಿಗೆ ಸೋಂಕು ದೃಢಪಟ್ಟಿದೆ.ಇಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸಂಚಾರಿ ಠಾಣೆಯ ಎಎಸ್ಐ , ಬ್ಯಾಟರಾಯನಪುರದ ಸಂಚಾರಿ ಠಾಣೆಯ  ಮೂವರು ಹಾಗೂ ಕಾಮಾಕ್ಷಿ ಪಾಳ್ಯದ  ಎಎಸ್ ಐಗೆ  ಕೊರೋನಾ ಸೋಂಕು ದೃಢಪಟ್ಟಿದೆ.

Exit mobile version