ಕರೋನಾ ವೈರಸ್‌ಗೆ ನಡುಗಿದ ಜನತೆಗೆ ಮತ್ತೊಂದು ಹ್ಯಾಂಟ ಶಾಕಿಂಗ್‌ !

ಕರೋನಾ ಅನ್ನೋ ಮಹಾಮಾರಿಗೆ ಬೆದರಿಬೆಂಡಾಗಿರೋ ವಿಶ್ವದ ಜನತೆಗೆ ಇದೀಗ ಮತ್ತೊಂದು ಶಾಕಿಂಗ್‌ ನ್ಯೂಸ್‌ ನೀಡಿದೆ ಚೀನಾ.ಇದಿಗಾಗಲೇ ಹುಬೈನ್‌ ವುಹಾನ್‌ ಪ್ರಾಂತ್ಯದಲ್ಲಿ ಹುಟ್ಟಿದ ಕರೋನಾ ಇಡೀ ಜಗತ್ತಿಗೆ ವ್ಯಾಪಿಸಿದ್ದು ಲಕ್ಷಾಂತರ ಜನರು ಈ ಸೋಂಕಿಗೆ ಬಲಿಯಾಗಿ ಸಾವನ್ನಪ್ಪುತ್ತಿದ್ದಾರೆ.ಇದರ ನಡುವೆ ಹ್ಯಾಂಟ ಅನ್ನೋ ಹೆಸರಿನ ವೈರಸ್‌ ಚೀನಾಕ್ಕೆ ಕಾಲಿಟ್ಟಿದ್ದು ; ಚೀನಾದ ಯುನ್ನಾನ್‌ ಪ್ರಾಂತ್ಯದ ವ್ಯಕ್ತಿಯೋರ್ವನಲ್ಲಿ ಈ ವೈರಸ್‌ ಕಾಣಿಸಿಸಿಕೊಂಡಿದ್ದು ಆತ ಈ ಹ್ಯಾಂಟ ರೋಗಕ್ಕೆ ಬಲಿಯಾಗಿದ್ದಾನೆ.

ಇನ್ನು ಜಗತ್ತಿನ ಗಮನವೆಲ್ಲ ಕರೋನಾ ವೈರಸ್‌ ಮೇಲಿರುವಾಗ ಸದ್ದಿಲ್ಲದೆ ಹ್ಯಾಂಟ ವೈರಸ್‌ ಕಾಲಿಟ್ಟಿದ್ದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.ಇನ್ನು ವೈರಸ್‌ಗೆ ಬಲಿಯಾಗಿದ್ದ ಈತ ಬಸ್‌ನಲ್ಲಿ ಪ್ರಯಾಣ ಮಾಡಿದ್ದು ತಾನು ಸಂಚರಿಸಿದ ಬಸ್ಸಿನಲ್ಲಿದ್ದ ೩೨ ಮಂದಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಅಂದಹಾಗೆ ಈ ವೈರಸ್‌ ಬಗ್ಗೆ ರೋಗ ನಿಯಂತ್ರನ ಮತ್ತು ತಡೆಗಟ್ಟುವಿಕೆ ಕೇಂದ್ರ ಹೇಳಿಕೆಯನ್ನು ನೀಡಿದ್ದು; ಹ್ಯಾಂಟ ವೈರಸ್‌ ಗಾಳಿಯಿಂದ ಹರಡುವುದಿಲ್ಲ. ಬದಲಾಗಿ ದಂಶಕಗಳ ಪ್ರಭೇದಕ್ಕೆ ಸೇರಿದ ಇಲಿಗಳು ಅಳಿಲುಗಳಂತಹ ಜೀವಿಗಳಿಂದ ಬರುವ ವೈರಸ್‌ ಆಗಿದೆ.ಎಂದು ತಿಳಿಸಿದೆ.

ಮುಖ್ಯವಾಗಿ ದಂಶಕ ಪ್ರಭೇದದ ಪ್ರಾಣಿಗಳನ್ನು ಸಾಕಿದ್ದರೆ, ಅಥವಾ ಅವುಗಳ ಸಂಖ್ಯೆ ಮನೆಯ ಸುತ್ತಮುತ್ತ ಹೆಚ್ಚಿದ್ದರೆ ಹ್ಯಾಂಟ ವೈರಸ್‌ ಬರುವ ಸಾಧ್ಯತೆ ಇದೆ .ಮಾತ್ರವಲ್ಲ ಇಲಿ, ಅಳಿಲು ಮೊಲಗಳಂತಹ ಹಿಕ್ಕೆಗಳು , ಮೂತ್ರ , ಗೂಡು ಹಾಗೂ ಅವುಗಳ ಬಾಯಿಯಿಂದ ಬಿದ್ದ ದ್ರವಗಳನ್ನು ಮುಟ್ಟಿ , ಬಾಯಿ ,ಕಣ್ಣು, ಮೂಗು ಮುಟ್ಟಿಕೊಂಡರೆ ಈ ರೋಗ ಬರುವ ಸಾದ್ಯತೆಯಿದೆ ಎನ್ನಲಾಗಿದೆ. ಆದ್ರೆ ಯಾವುದೇ ಕಾರಣಕ್ಕೂ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.

Exit mobile version