ಬೆಂಗಳೂರು: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಹಬ್ಬ. ಈ ಹಬ್ಬದಂದು ಸಾಮಾನ್ಯವಾಗಿ ಮನೆಯನ್ನೆಲ್ಲ ಸಿಂಗಾರ ಮಾಡಿ ಎಳ್ಳು–ಬೆಲ್ಲ ಹಂಚಿ ತುಂಬಾ ಸಂಭ್ರಮವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗೂ ದೇಗುಲಗಳಲ್ಲಿ ವಿಶೇಷವಾಗಿ ಪೂಜೆ ಪುನಸ್ಕಾರಗಳು ಇರುತ್ತವೆ ಹಾಗೂ ಹಬ್ಬದ ದಿನದಂದು ಸಾಮಾನ್ಯವಾಗಿ ಮಾರುಕಟ್ಟೆಗಳು ತುಂಬಾನೇ ನಳನಳಿಸುತ್ತಿರುತ್ತದೆ.
ಆದರೆ ಹೋದ ವರ್ಷದಂತೆ ಈ ವರ್ಷ ಕೂಡ ಕೋವಿಡ್ನಿಂದಾಗಿ ,ಹಾಗೂ ರಾಜ್ಯ ಸರ್ಕಾರ ಆದೇಶಿಸಿರುವ ವೀಕೆಂಡ್ ಕರ್ಫ್ಯೂ ನಿಂದಾಗಿ ಸಂಕ್ರಾಂತಿ ಹಬ್ಬವನ್ನು ತುಂಬಾ ಸರಳವಾಗಿ ಆಚರಿಸುತ್ತಿದೆ ಹಾಗೂ ದೇಗುಲಗಳಲ್ಲಿ ಸರಳವಾಗಿ ಪೂಜೆ-ಪುನಸ್ಕಾರಗಳು ನೆರವೇರುತ್ತಿದೆ, ಹಾಗೂ ಮಾರುಕಟ್ಟೆಗಳು ಕೂಡ ಹಬ್ಬದ ಸಂಭ್ರಮಾಚರಣೆ ಇಲ್ಲದೆ ಹಾಗೂ ಕಡಿಮೆ ಗ್ರಾಹಕ ರಿಂದಾಗಿ ಬಿಕೋ ಎನ್ನುತ್ತಿದೆ. ಮುಂದಿನ ವರ್ಷವಾದರೂ ಕೋವಿಡ್ ಎನ್ನುವ ಮಹಾಮಾರಿ ದೂರವಾಗಿ ಎಲ್ಲವೂ ಮೊದಲಿನಂತಾಗಲಿ ಎಂದು ಈ ಹಬ್ಬದ ದಿನ ಎಲ್ಲರೂ ಆಶಿಸುತ್ತಿದ್ದೇವೆ.