ಕಾರುಗಳನ್ನೇ ಮಾರಾಟಕ್ಕಿಟ್ಟ ರಾಗಿಣಿ ಪೋಷಕರು

ಬೆಂಗಳೂರು, ನ. 12: ಈ ಹಿಂದೆ ಮಗಳಿಗಾಗಿ ಮನೆ ಮಾರಾಟಕ್ಕಿಟ್ಟಿದ್ದ ನಟಿ ರಾಗಿಣಿ ದ್ವಿವೇದಿ ಪೋಷಕರು ಸದ್ಯ ಆರ್ಥಿಕ ಸಂಕಷ್ಟ ಹಿನ್ನಲೆ ತಮ್ಮ ಕಾರುಗಳನ್ನೇ ಮಾರಾಟಕ್ಕಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸ್ಯಾಂಡಲ್‌ವುಡ್‌ ಡ್ರಗ್ಸ್‌ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟಿ ರಾಗಿಣಿ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲೂ ವಜಾ ಆಗಿತ್ತು.  

ಮಗಳನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ರಾಗಿಣಿ ಪೋಷಕರು ಕಾನೂನು ಹೋರಾಟ ನಡೆಸುತ್ತಿದ್ದು, ಆರ್ಥಿಕ ಸಂಕಷ್ಟ ಹಿನ್ನಲೆ ಯಲಹಂಕ ಫ್ಲಾಟ್‌ ಮಾರಾಟಕ್ಕಿಟ್ಟಿದ್ದರು. ಆದರೆ ಫ್ಲಾಟ್‌ ಮಾರಾಟವಾಗದ ಕಾರಣ ಸದ್ಯ ತಮ್ಮ ಕಾರುಗಳನ್ನು ಮಾರಲು ಮುಂದಾಗಿದ್ದಾರೆ. ಇನೋವಾ ಕಾರಿಗೆ 9ಲಕ್ಷ ಹಾಗೂ ಎಸ್‌ಎಕ್ಸ್‌ – 4 ಕಾರಿಗೆ 3ಲಕ್ಷ ನಿಗದಿಪಡಿಸಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Exit mobile version