ಬೆಂಗಳೂರು: ಕೊರೋನಾ ಮಹಾ ಮಾರಿ ರಾಜ್ಯದಲ್ಲಿ ತೀವೃವಾಗಿ ಹರಡುವುದರಿಂದ ಇದರ ಬಗ್ಗೆ ಪ್ರತಿಯೊಬ್ಬ ಪ್ರಜೆಯೂ ಗಂಭೀರವಾಗಿ ಯೋಚಿಸುವುದು ಅಗತ್ಯವಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ರೋಗಲಕ್ಷಣ ಇರುವವರು ಕೊರೋನಾ ಪರೀಕ್ಷೆ ಮಾಡಿಕೊಳ್ಳುವುದು ಮುಂತಾದ ಅನೇಕ ರೂಲ್ಸ್ ಗಳನ್ನು ತಂದಿದೆ, ಮಾಸ್ಕ್ ಧರಿಸದೆ ಇದ್ದವರಿಗೆ 500ರಿಂದ 1000 ಫೈನ್ ಹಾಕಿದರೂ ಸಾರ್ವಜನಿಕರು ಇದನ್ನು ಗಂಭೀರವಾಗಿ ಪರಿಗಣಿಸದೆ ನಡೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ.
ಈ ಹಿನ್ನಲೆಯಲ್ಲಿ ಇದೀಗ ಸರಕಾರ ಕೊರೋನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಇದನ್ನು ನಿರಾಕರಿಸಿದವರಿಗೆ 50,000 ಸಾವಿರ ರೂ ವರೆಗೂ ದಂಡ ವಿಧಿಸಲಾಗುವುದು ಎನ್ನಲಾಗಿದೆ. ಕೊರೋನಾ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರು ಹಾಗೂ ರೋಗ ಲಕ್ಷಣ ಕಂಡು ಬಂದವರು ಕೊರೋನಾ ಪರೀಕ್ಷೆಗೆ ಹಿಂದೇಟು ಹಾಕಿ ಇನ್ನಷ್ಟು ಜನರಿಗೆ ಹಬ್ಬಿಸಿ ತೊಂದರೆಗೊಳಪಡುವುದನ್ನು ತಪ್ಪಿಸಲು ಸರಕಾರ ಈ ತೀರ್ಮಾನವನ್ನು ಕೈಗೊಂಡಿದೆ.