ಕೋವಿಡ್ : ಫ್ರಾನ್ಸ್ ನಲ್ಲಿ ಕರ್ಫ್ಯೂ ಜಾರಿ

ಪ್ಯಾರಿಸ್‍: ಫ್ರಾನ್ಸ್ ದೇಶದ ಪ್ಯಾರಿಸ್‌ ಸೇರಿದಂತೆ ಹಲವಾರು ನಗರಗಳಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚುತ್ತಿರುವ ಕಾರಣ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌‌‌ ಮ್ಯಾಕ್ರನ್‌‌ ಫ್ರಾನ್ಸ್‌ನಲ್ಲಿ ಕರ್ಫ್ಯೂ ಘೋಷಿಸಿದ್ದಾರೆ.

ಶನಿವಾರದಿಂದ ನಾಲ್ಕು ವಾರಗಳವರೆಗೆ ಕರ್ಫ್ಯೂ ಜಾರಿಯಾಗಲಿದ್ದು, ಬೆಳಿಗ್ಗೆ 9ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಈ ಬಗ್ಗೆ ಮಾತನಾಡಿರುವ ಅವರು, ಕರ್ಫ್ಯೂ ಸಮರ್ಪಕವಾದ ಕ್ರಮವಾಗಿದೆ. ಐಲೆ-ಡಿ-ಫ್ರಾನ್ಸ್‌‌ ಪ್ರದೇಶದಲ್ಲಿ, ಲಿಲ್ಲೆ, ಗ್ರನೋಬಲ್‌‌, ಲಿಯಾನ್‌‌, ಆಮರ್ಸೆಲ್ಲೆ, ರೂಯೆನ್, ಸೇಂಟ್‌‌-ಎಟಿಯನ್, ಮಾಂಟ್ಪೆಲಿಯರ್‌‌ ಸೇರಿದಂತೆ ಮುಂತಾದ ಭಾಗಗಳಲ್ಲಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.

ದೇಶವು ಕೊರೊನಾದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಆದರೆ, ನಿಯಂತ್ರಣ ಕಳೆದುಕೊಂಡಿಲ್ಲ ಎಂದಿದ್ದಾರೆ. ನಾವು ನಿಯಂತ್ರಣ ಕಳೆದುಕೊಂಡಿಲ್ಲ. ನಾವು ಸದ್ಯ ಚಿಂತೆಗೆ ದೂಡುವ ಪರಿಸ್ಥಿತಿಲ್ಲಿದ್ದೇವೆ. ಕೊರೊನಾದ ಮೊದಲ ಅಲೆಗೆ ನಾವು ನಿಯಂತ್ರಣ ಕೈಗೊಂಡಿದ್ದೇವೆ. ಎಂಟು ತಿಂಗಳಿನಿಂದ ಪರಿಚಿತವಾಗಿರುವ ವೈರಸ್‌‌‌ ಈಗ ಹಿಂತಿರುಗಿದೆ. ನಾವೀಗ ಎರಡನೇ ಅಲೆಯ ಪರಿಸ್ಥಿತಿಯಲ್ಲಿದ್ದೇವೆ ಎಂದು ಹೇಳಿದ್ದಾರೆ.

ವರದಿಯ ಪ್ರಕಾರ, ಜುಲೈನಿಂದ ಫ್ರಾನ್ಸ್‌‌ನಲ್ಲಿ ಕೊರೊನಾ ವೈರಸ್‌ ಪ್ರಕರಣ ಏರಿಕೆಯಾಗಿತ್ತು. ಅ.10ರಂದು ಸುಮಾರು 27,000 ಕೊರೊನಾ ಪ್ರಕರಣಗಳು ದಾಖಲಾಗಿವೆ. ಬುಧವಾರದಂದು ಫ್ರಾನ್ಸ್‌ನಲ್ಲಿ 7,56,472 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 32,942 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಗಳು ಖಚಿತಪಡಿಸಿದ್ದಾರೆ.

Exit mobile version