ಗರ್ಭಿಣಿಯರು ಜೋಳ ತಿನ್ನಬೇಕಂತೆ..ಯಾಕೆ ಗೊತ್ತಾ..?

ಆರೋಗ್ಯಕರ ಆಹಾರ ಪದಾರ್ಥಗಳ ಪೈಕಿ ಜೋಳವೂ ಒಂದು.. ಜೋಳದಲ್ಲಿ ಫಾಲಿಕ್ ಆಮ್ಲ, ನಾರಿನಂಶ, ವಿಟಮಿನ್ ಬಿ1, ಬಿ5 ಮತ್ತು ಸಿ ಇರುವುದರಿಂದ ಜೀರ್ಣಕ್ರಿಯೆಗೆ ಇದು ಸಹಕಾರಿಯಾಗಿದೆ. ಇದನ್ನು ಗರ್ಭಿಣಿಯರು ಕೂಡ ತಿನ್ನಬಹುದಾಗಿದ್ದು, ಇದನ್ನು ತಿನ್ನುವುದರಿಂದ ಗರ್ಭಿಣಿಯರು ಅನೇಕ ಪ್ರಯೋಜನಗಳನ್ನು ಪಡೆಯಬಹುದು.

  1. ಗರ್ಭಿಣಿಯಾಗಿದ್ದಾಗ ಶರೀರದಲ್ಲಿ ಹಾರ್ಮೋನ್‌ಗಳ ಬದಲಾವಣೆಯಾಗುತ್ತದೆ ಹಾಗೂ ಜೀರ್ಣಕ್ರಿಯೆ ನಿಧಾನವಾಗಿ ನಡೆಯುವುದು, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಜೋಳದಲ್ಲಿ ನಾರಿನಂಶ ಅಧಿಕವಿರುವುದರಿಂದ ಗರ್ಭಿಣಿಯರು ಜೋಳವನ್ನು ತಿನ್ನುವುದು ಒಳ್ಳೆಯದು.
  2. ಜೋಳದಲ್ಲಿ zeaxanthin ಎಂಬ ಅಂಶವಿದ್ದು ಇದು ಮ್ಯಾಕ್ಯೂಲರ್ ಡಿಜನರೇಷನ್ ಎಂಬ ಕಣ್ಣಿನ ಸಮಸ್ಯೆ ಉಂಟಾಗದಂತೆ ತಾಯಿಯನ್ನು ಹಾಗೂ ಮುಂದೆ ಮಗುವಿಗೆ ಕಣ್ಣಿನ ಸಮಸ್ಯೆ ಉಂಟಾಗದಂತೆ ತಡೆಯುತ್ತದೆ.
  3. ಜೋಳದಲ್ಲಿ ಫಾಲಿಕ್ ಆಮ್ಲ ಇರುವುದರಿಂದ ಮೂಳೆಯಾರೋಗ್ಯಕ್ಕೆ ಒಳ್ಳೆಯದು, ಹಾಗೂ ಮಗುವಿಗೆ ದೈಹಿಕ ನ್ಯೂನತೆ ಉಂಟಾಗದಂತೆ ತಡೆಯುತ್ತದೆ.
  4. ಮಗುವಿನ ಮೆದುಳು ಸಾಮರ್ಥ್ಯ ಹೆಚ್ಚಿಸುವ ಆಹಾರದಲ್ಲಿ ಇದು ಕೂಡ ಒಂದಾಗಿದೆ. ಇದರಲ್ಲಿರುವ ಥಯಾಮೈನ್ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ.
  5. ಜೋಳದಲ್ಲಿ ಬೀಟಾ ಕೆರೊಟಿನ್ ಹಾಗೂ ವಿಟಮಿನ್ ಎ ಇದ್ದು ಇದು ಗರ್ಭಿಣಿಯರಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಮಗುವಿನ ಬೆಳವಣಿಗೆಗೆ ಸಹಕಾರಿ.

ಅಜೀರ್ಣ ಸಮಸ್ಯೆಯಿದ್ದಾಗ ಜೋಳ ತಿನ್ನಬೇಡಿ. ಹೃದಯ ಸಮಸ್ಯೆ ಇರುವವರು ದಿನಾ ತಿನ್ನುವುದು ಒಳ್ಳೆಯದಲ್ಲ. ಯಾಕೆಂದರೆ ಜೋಳದಲ್ಲಿ ಅಧಿಕ ಕೊಬ್ಬಿನ ಆಮ್ಲವಿದೆ. ಅತಿಯಾದರೆ ಅಮೃತವೂ ವಿಷ ಎಂಬಂತೆ ಜೋಳ ಆರೋಗ್ಯಕರ ಎಂಬ ಕಾರಣಕ್ಕೆ ಅತಿಯಾಗಿ ತಿಂದರೆ ಮತ್ಯಾವುದೋ ಅರೋಗ್ಯ ಸಮಸ್ಯೆಗೆ ತುತ್ತಾಗಬೇಕಾಗುತ್ತದೆ.

Exit mobile version