ಗುಡ್‌ನ್ಯೂಸ್‌: ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ

ನವದೆಹಲಿ, ಅ. 27: ದೇಶದಲ್ಲಿ ಕೊರೊನಾ ತಲ್ಲಣವನ್ನೇ ಮೂಡಿಸಿತ್ತು. ಆದರೆ ಇತ್ತಿಚಿಗಿನ ವರದಿಗಳ ಪ್ರಕಾರ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನು ಕೊಂಚ ಸಾಮಾಧಾನಕರ ಸಂಗತಿ. ಅದಲ್ಲದೇ ಕಳೆದ 13 ದಿನಗಳಲ್ಲಿ 10 ಲಕ್ಷ ಕೊರೋನಾ ಸೋಂಕಿತರು ಚೇತರಿಕೆಯಾಗಿರುವುದು ತೃಪ್ತಿದಾಯಕ ಸಂಕೇತವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದಾಗಿ ಅವರು ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತು ವಿವರಿಸಿದರು.

ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದೆಹಲಿ, ಛತ್ತೀಸ್ಗಢ ಮತ್ತು ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ ಶೇ. 58ರಷ್ಟು ಹೊಸ ಸಾವಿನ ಪ್ರಕರಣ ವರದಿಯಾಗಿರುವುದಾಗಿ ತಿಳಿಸಿದರು.

ಸದ್ಯ ದೇಶದಲ್ಲಿನ ಚೇತರಿಕೆ ಪ್ರಮಾಣ ಶೇ. 90.62ರಷ್ಟಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಉತ್ತಮ ಸಂಕೇತವಾಗಿದೆ ಎಂದು ರಾಜೇಶ್ ಭೂಷಣ್ ಹೇಳಿದರು.

Exit mobile version