ಚಿತ್ರಮಂದಿರಗಳ ಪುನರ್ ಆರಂಭ – ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ನವದೆಹಲಿ : ಕೊರೊನಾ ವೈರಸ್ ಹಾವಳಿಯಿಂದಾಗಿ ಕಳೆದ ಏಳು ತಿಂಗಳುಗಳಿಂದ ಮುಚ್ಚಲ್ಪಟ್ಟಿದ್ದ ಸಿನಿಮಾ ಮಂದಿರಗಳು ಅ.15ರಿಂದ ಪುನಾರಂಭವಾಗಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗಷ್ಟೇ ಚಿತ್ರ ವೀಕ್ಷಣೆಗೆ ಅನಕಾಶ ಕಲ್ಪಿಸಲಾಗಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಚಿತ್ರಮಂದಿರಗಳ ಪುನಾರಂಭ ಮತ್ತು ಹೊಸ ಮಾರ್ಗಸೂಚಿಗಳ ಬಗ್ಗೆ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾಹಿತಿ ಒದಗಿಸಿದರು.

ಕೇವಲ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶ ಕಲ್ಪಿಸುವುದರೊಂದಿಗೆ ಅ.15ರಿಂದ ಚಿತ್ರಮಂದಿರಗಳು ಆರಂಭವಾಗಲಿವೆ. ಒಂದು ಸ್ಥಾನದ ಅಂತರ ಕಾಯ್ದುಕೊಂಡು ಚಿತ್ರರಸಿಕರು ಸಿನಿಮಾ ವೀಕ್ಷಿಸಬಹುದು ಎಂದು ಸಚಿವರು ತಿಳಿಸಿದರು.

ಸಿನಿಮಾಮಂದಿರಗಳಲ್ಲಿ ಸ್ಯಾನಿಟೈಸರ್ ಮತ್ತು ಫೇಸ್‍ಮಾಸ್ಕ್ ಬಳಕೆ ಕಡ್ಡಾಯ. ಆನ್‍ಲೈನ್ ಮೂಲಕ ಟಿಕೆಟ್‍ಗಳನ್ನು ಬುಕ್ ಮಾಡಬಹುದು. ಸಿಂಗಲ್ ಸ್ಕ್ರೀನ್ ಥಿಯೇಟರ್‍ಗಳಲ್ಲಿ ಬಾಕ್ಸ್ ಆಫೀಸ್ ಮೂಲಕ ಟಿಕೆಟ್ ನೀಡಲು ಅವಕಾಶ ಇದೆ ಎಂದು ಅವರು ವಿವರಿಸಿದರು.

ಸಿನಿಮಾ ಹಾಲ್‍ಗಳಲ್ಲಿ ಸಾಕಷ್ಟು ಗಾಳಿಯಾಡುವ ಸೌಲಭ್ಯ ಕಲ್ಪಿಸಬೇಕು.ಹವಾನಿಯಂತ್ರಿತ ಸಾಧನಗಳನ್ನು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಮೇಲ್ಟಟ್ಟ ತಾಪಮಾನ ನಿರ್ವಹಣೆ ಮಾಡಬೇಕು ಎಂದು ಅವರು ಮಾರ್ಗಸೂಚಿಗಳ ಬಗ್ಗೆ ವಿವರಿಸಿದರು.

Exit mobile version