ಜುಲೈನಲ್ಲಿ ನಡೆಯಲಿದೆ ಸಿಬಿಎಸ್‍ಸಿಯ 10 ಹಾಗೂ 12 ನೇ ತರಗತಿಯ ಎಕ್ಸಾಂ

ಕಿಲ್ಲರ್ ವೈರಸ್ ಕೊರೋನಾದಿಂದಾಗಿ ವಿದ್ಯಾರ್ಥಿಗಳ ಜೀವನ ಅಲ್ಲೋಲ ಕಲ್ಲೋಲವಾಗಿದೆ.. ತಮ್ಮ ಜೀವನ ರೂಪಿಸೋ ಪ್ರಮುಖ ಘಟ್ಟದ ಪರೀಕ್ಷೆಯನ್ನು ಬರೆಯಲಾಗದೆ ಒದ್ದಾಡಲು ಶುರುಮಾಡಿದ್ದಾರೆ. ಇದರ ನಡುವೆ ಇದೀಗ ಶಿಕ್ಷಣ ಸಚಿವರಿಂದ ಮಹತ್ವದ ಆದೇಶವೊಂದು ಹೊರಬಿದ್ದಿದ್ದು ; ವಿದ್ಯಾರ್ಥಿಗಳು ಕೊಂಚ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

ಶುಕ್ರವಾರ ನವದೆಹಲಿಯಲ್ಲಿ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಾತನಾಡಿದ್ದು ಸಿಬಿಎಸ್‍ಸಿಯ 10 ಮತ್ತು 12 ನೇ ತರಗತಿಯ ಪರೀಕ್ಷೆಗಳು ಕೊರೋನಾ ವೈರಸ್‍ನಿಂದಾಗಿ ನಡೆಸಲು ಸಾಧ್ಯವಾಗಲಿಲ್ಲ .ಆದ್ರೆ ಖಂಡಿತವಾಗಿ ಆದಷ್ಟು ಬೇಗ ಪರೀಕ್ಷೆ ನಡೆಸಲು ತೀರ್ಮಾಣವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜುಲೈ 1 ರಿಂದ 15ರವರೆಗೆ ಸಿಬಿಎಸ್‍ಸಿಯ 10 ಮತ್ತು 12 ನೇ ತರಗತಿಯ ಪರೀಕ್ಷೆ ನಡೆಸಲು ಇಂದು ತೀರ್ಮಾನ ಮಾಡಲಾಗಿದೆ . ಆದ್ರೆ ಇದಕ್ಕೆಲ್ಲಾ ವಿದ್ಯಾರ್ಥಿಗಳು ತಾಳ್ಮೆಯಿಂದ ಕಾಯಬೇಕೆಂದಿದ್ದಾರೆ. ಜೊತೆಗೆ ಮಾತು ಮುಂದುವರಿಸಿದ ಸಚಿವರು ಪರೀಕ್ಷಾ ವೇಳಾಪಟ್ಟಿಯನ್ನು ಸವಿವರವಾಗಿ ಸಿಬಿಎಸ್‍ಸಿ ನಂತರದಲ್ಲಿ ಪ್ರಕಟಿಸಲಿದೆ ಎಂದು ಸಚಿವರು
ಮಾಹಿತಿ ಕೊಟ್ಟಿದ್ದಾರೆ.

Exit mobile version