ದೆಹಲಿಯಲ್ಲಿ ಕ್ಷೀಣಿಸಿದ ಗಾಳಿಗುಣಮಟ್ಟ

ನವದೆಹಲಿ: ದೆಹಲಿಯಲ್ಲಿ ಕೊರೋನಾದಿಂದಾಗಿ ಕೈಗಾರಿಕೆ, ವಾಹನ ಸಂಚಾರ ಕಡಿಮೆಯಾಗಿ ವಾಯುಮಾಲಿನ್ಯ ಕಡಿಮೆಯಾಗಿದ್ದ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತೊಮ್ಮೆ ಕ್ಷೀಣಿಸಲು ಪ್ರಾರಂಭಿಸಿದೆ.

ವಾಯು ಗುಣಮಟ್ಟ ಸೂಚ್ಯಂಕವು ಆನಂದ್ ವಿಹಾರದಲ್ಲಿ 275, ರೋಹಿಣಿಯಲ್ಲಿ 263, ಐಟಿಒದಲ್ಲಿ 275 ಮತ್ತು ನೆಹರೂ ನಗರದಲ್ಲಿ 229 ದಾಖಲಾಗಿದೆ. ಇದಕ್ಕೆ ಕಾರಣ ವಾತಾವರಣದಲ್ಲಿನ ಮಾಲಿನ್ಯಕಾರಕಗಳ ಏರಿಕೆಯೊಂದಿಗೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿದೆ.

ತೀರ ಕಳಪೆ ಗುಣಮಟ್ಟದಿಂದಾಗಿ ದೆಹಲಿ ನಿವಾಸಿಗಳು ಕಳವಳಗೊಂಡಿದ್ದಾರೆ. ಇದಕ್ಕಾಗಿ ದೆಹಲಿ ಸರ್ಕಾರವು ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸಲು ”ಯುದ್ಧ್ ಪ್ರದೂಷಣ್​ ಕೆ ವಿರುದ್ಧ್​” ಅಭಿಯಾನವನ್ನು ಆರಂಭಿಸಿದೆ.

Exit mobile version