ದ್ವಿತೀಯ ಟೆಸ್ಟ್: ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ

Image : ICC

ಭರವಸೆಯ ಆಟಗಾರ ಬೆನ್‍ ಸ್ಟೋಕ್ಸ್ ಅವರ ಆಲ್‍ರೌಂಡರ್‍
ಪ್ರದರ್ಶನದ ನೆರವಿನಿಂದ ಆತಿಥೇಯ ಇಂಗ್ಲೆಂಡ್, ಪ್ರವಾಸಿ
ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲ ಮಾಡಿಕೊಂಡಿದೆ.

ಮ್ಯಾಂಚೆಸ್ಟರ್‍ನ ಓಲ್ಡ್‍ಟ್ರಾಫರ್ಡ್‍ನಲ್ಲಿ ನಡೆದ ಪಂದ್ಯದಲ್ಲಿ ಶ್ರೇಷ್ಠ ಕಮ್‍ಬ್ಯಾಕ್ ಮಾಡಿದ ಇಂಗ್ಲೆಂಡ್, ಸಾಂಘಿಕ ಪ್ರದರ್ಶನ ನೀಡುವ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ವೆಸ್ಟ್ ಇಂಡೀಸ್‍ ತಂಡಕ್ಕೆ 312 ರನ್‍ಗಳ ಸವಾಲಿನ ಗುರಿ ನೀಡಿದ್ದ ಇಂಗ್ಲೆಂಡ್, ಪ್ರವಾಸಿ ತಂಡವನ್ನು 198 ರನ್‍ಗಳಿಗೆ ಕಟ್ಟಿಹಾಕುವ ಮೂಲಕ 113 ರನ್‍ಗಳ ಭರ್ಜರಿ ಗೆಲುವು ಸಾಧಿಸಿದೆ. ಇಂಗ್ಲೆಂಡ್‍
ಗೆಲುವಿನಲ್ಲಿ ಪ್ರಮುಖ ಪಾತ್ರನಿರ್ವಹಿಸಿದ ಬೆನ್‍ ಸ್ಟೋಕ್ಸ್‍ 1ನೇ ಇನ್ನಿಂಗ್ಸ್‍ನಲ್ಲಿ 176 ಹಾಗೂ 2ನೇ ಇನ್ನಿಂಗ್ಸ್‍ನಲ್ಲಿ ಅಜೇಯ 78 ರನ್‍ಗಳಿಸಿ ಮಿಂಚಿದರು. ಬೌಲಿಂಗ್‍ನಲ್ಲಿ ತಂಡಕ್ಕೆ ಆಸರೆಯಾದ ವೇಗಿ ಸ್ಟುವರ್ಟ್‍ ಬ್ರಾಡ್ ಎರಡೂ ಇನ್ನಿಂಗ್ಸ್‍ನಿಂದ ತಲಾ 6 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು.

ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದು ಸಮಬಲ ಸಾಧಿಸಿವೆ. ಸರಣಿಯ 3ನೇ ಪಂದ್ಯ ಜು.24ರಿಂದ ಮ್ಯಾಂಚೆಸ್ಟರ್‍ನ ಓಲ್ಡ್‍ಟ್ರಾಫರ್ಡ್‍ನಲ್ಲಿ ನಡೆಯಲಿದೆ.

Exit mobile version