ಧೋನಿ ಪುತ್ರಿಗೆ ಬೆದರಿಕೆ ಹಾಕಿದ್ದ 16 ವರ್ಷದ ಬಾಲಕನ ಬಂಧನ

ಗುಜರಾತ್: ಐಪಿಎಲ್ನಲ್ಲಿ ಸತತ ಸೋಲನುಭವಿಸುತ್ತಿರುವ ಚೆನ್ನೈ ಸೂಪರ್‍ ಕಿಂಗ್ಸ್ ಪ್ರದರ್ಶನದಿಂದ ಆಕ್ರೋಶಗೊಂಡು ಎಂ.ಎಸ್. ಧೋನಿ ಅವರ ಪುತ್ರಿಗೆ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರದ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 16 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತ್‍ನ ಮುಂದ್ರಾ ಬಳಿಯ ನಾಮ್ನಾಕಪಾಯ್ ಗ್ರಾಮದ 16 ವರ್ಷದ ಬಾಲಕನನ್ನು ಗುಜರಾತ್ನ ಕಜ್‍ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ. 12ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಾಲಕ, ಸಿಎಸ್‍ಕೆ ತಂಡದ ನಾಯಕ ಧೋನಿ ಅವರ 6 ವರ್ಷದ ಮಗಳಿಕೆ ಅತ್ಯಾಚಾರದ ಬೆದರಿಕೆ ಹಾಕಿದ್ದ. ಈತನನ್ನು ಬಂಧಿಸಿರುವ ಕಜ್
ಜಿಲ್ಲಾ ಪೊಲೀಸರು, ಬಂಧಿತನನ್ನು ರಾಂಚಿ ಪೊಲೀಸರ ವಶಕ್ಕೆ ಒಪ್ಪಿಸಲಿದ್ದಾರೆ ಎನ್ನಲಾಗಿದೆ.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಧೋನಿ ಪುತ್ರಿಗೆ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Exit mobile version