ನನ್ನ ಆರೋಗ್ಯದ ಕುರಿತ ವದಂತಿ ಸತ್ಯ: ರಜನಿಕಾಂತ್

ಚೆನ್ನೈ, ಅ. 29: ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರಜನಿಕಾಂತ್ ಕಳೆದ ರಾತ್ರಿಯಿಂದ ತಮ್ಮ ಆರೋಗ್ಯ ಕುರಿತು ಹಬ್ಬಿರುವ ಹಲವು ವದಂತಿಗಳಿಗೆ ಟ್ವಿಟ್ಟರ್ ಮೂಲಕ ಅಂತ್ಯ ಹಾಡಿದ್ದಾರೆ.

ರಜನಿಕಾಂತ್ 2011ರಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು, ಅವರು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ರಜನಿಕಾಂತ್ ಹೆಸರಿನಲ್ಲಿ ಪ್ರಕಟವಾದ ಪತ್ರದಲ್ಲಿ ತಿಳಿಸಲಾಗಿದೆ. ಇನ್ನೂ 2016 ರಲ್ಲಿ ಮತ್ತೆ ಸಮಸ್ಯೆ ಉಲ್ಬಣಿಸಿದಾಗ, ಅಮೆರಿಕಾಗೆ ತೆರಳಿ ಮೂತ್ರ ಪಿಂಡ ಬದಲಾವಣೆ ಮಾಡಿಸಿಕೊಂಡಿದ್ದಾಗಿ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಆದರೆ, ಪತ್ರದಲ್ಲಿರುವ ಈ ಅಂಶಗಳು ಸತ್ಯ ಎಂದು ತಲೈವಾ ಸ್ಪಷ್ಟಪಡಿಸಿದ್ದಾರೆ.

Exit mobile version