ನೀಟ್ ಎಡವಟ್ಟು, ಜೀವಕ್ಕೆ ಆಪತ್ತು

ನವದೆಹಲಿ ಅ.24: ವೈದ್ಯಕೀಯ ಕೋರ್ಸ್‌ಗಳ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶದ ಮೌಲ್ಯಮಾಪಕರಿಂದ ಆದ ಎಡವಟ್ಟೊಂದು ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಜೀವ ಕಳೆದುಕೊಳ್ಳುವಂತೆ ಮಾಡಿದೆ.

ತಾನು ವೈದ್ಯೆಯಾಗಿ ಸಮಾಜ ಸೇವೆ ಮಾಡಬೇಕೆಂಬ ದೊಡ್ಡ ಕನಸು ಕಂಡಿದ್ದ ಮಧ್ಯಪ್ರದೇಶದ ವಿಧಿ ಸೂರ್ಯವಂಶಿ, ನೀಟ್ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾದಿದ್ದಳು. ಅಕ್ಟೋಬರ್ 16 ರಂದು ಫಲಿತಾಂಶ ಪ್ರಕಟಗೊಂಡಿದ್ದು, ಫಲಿತಾಂಶ ಪರಿಶೀಲಿಸಿದ ವಿಧಿಗೆ ಆಘಾತವಾಗಿದೆ.

ಕೇವಲ 6 ಅಂಕ ಬಂದಿರುವುದನ್ನು ಕಂಡು ವಿಧಿ ಅವರು ಆಘಾತಕ್ಕೊಳಗಾಗಿದ್ದಾರೆ. ಹಾಗೂ ವಿಧಿಯ ಪೋಷಕರು ಕೂಡ ನಂಬಲು ಸಾಧ್ಯವಾಗಿಲ್ಲ. ಇದರಿಂದ ಮಾನಸಿಕವಾಗಿ ಆಘಾತಕ್ಕೊಳಗಾದ ವಿಧಿ ಕೂಡಲೇ ತನ್ನ ರೂಮಿನ ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ನಡುವೆ ವಿಧಿ ಸೂರ್ಯವಂಶಿ ನೀಟಿ ಪರೀಕ್ಷೆ ಒಎಂಆರ್ ಶೀಟ್ (ಉತ್ತರ ಪತ್ರಿಕೆಯ ಪ್ರತಿ) ಯನ್ನು ರೀ ಕರೆಕ್ಷನ್ ಮಾಡಿದಾಗ ಆಕೆ 590 ಅಂಕ ಪಡೆದಿರುವುದು ಕಂಡು ಬಂದಿದೆ. ವಿದ್ಯಾರ್ಥಿನಿ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ವರದಿಯಾಗಿದೆ. ನೀಟ್ ಎಡವಟ್ಟಿನಿಂದಾಗಿ, ತನ್ನದಲ್ಲದ ತಪ್ಪಿಗಾಗಿ ಓರ್ವ ಪ್ರತಿಭಾನ್ವಿತೆ ಜೀವ ತೆಗೆದುಕೊಳ್ಳುವಂತಾಯಿತು.

Exit mobile version