ಪಶು ವೈದ್ಯೆಯ ಮೇಲಿನ ಅತ್ಯಾಚಾರಿಗಳ ಎನ್‌ಕೌಂಟರ್‌ ವಿಚಾರ : ಸುಪ್ರೀಕೋರ್ಟ್ ನಿಂದ ದಿಟ್ಟ ಹೆಜ್ಜೆ

ನವದೆಹಲಿ,ಡಿ,12: ಹೈದರಾಬಾದ್‌ ಮೂಲದ ಪಶು ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ವಿಎಸ್ ಸಿರ್ ಪುರ್ಕರ್ ಅವರ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ತನಿಖಾ ಸಮಿತಿಯ ರಚಿಸಲಾಗಿದೆ.

ಸಮಿತಿಯಲ್ಲಿ ನಿವೃತ್ತ ನ್ಯಾ. ರೇಖಾ ಬಲ್ಡೋಟಾ ಸಿಬಿಐ ನಿವೃತ್ತ ನಿರ್ದೇಶಕರಾದ ಕಾರ್ತಿಕೇಯನ್ ಅವರು ಸದಸ್ಯರಾಗಿದ್ದಾರೆ. ಹಾಗೆಯೇ  ಪ್ರಕರಣದ ಇತರೆ ತನಿಖೆಗಳಿಗೆ ಸುಪ್ರೀಂಕೋರ್ಟ್ ಸದ್ಯ ತಡೆ ನೀಡಿದೆ.ಆರು ತಿಂಗಳೊಳಗೆ ತನ್ನ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಮೂವರ ಸಮಿತಿಗೆ ಸುಪ್ರೀಂಕೋರ್ಟ್  ಸೂಚನೆ ನೀಡಿದೆ. ಜೊತೆಗೆ  ಸಮಿತಿ ಸದಸ್ಯರಿಗೆ ಸಿಆರ್ ಪಿಎಫ್ ಭದ್ರತೆ ಕೊಡಬೇಕು. ಸರ್ಕಾರವೇ ಸಮಿತಿ ಸದಸ್ಯರ ವೆಚ್ಚ ಭರಿಸಬೇಕು ಎಂದು ತೆಲಂಗಾಣ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

Exit mobile version