ಪಾಕಿಸ್ತಾನದ ಸಿಂಧ್‍ನಲ್ಲಿ ಸ್ಫೋಟ: ಮೂವರ ಸಾವು

ಘೋಟ್ಕಿಯಲ್ಲಿ ಸಿಂಧ್ ರೇಂಜರ್ಸ್‍ನ ವಾಹನ ಸ್ಫೋಟಗೊಂಡಿಂದು ಮೂವರು ಮೃತಪಟ್ಟಿದ್ದಾರೆ.
ಸ್ಫೋಟದಲ್ಲಿ ಸಿಂಧ್ ರೇಂಜರ್ಸ್‍ನ ಸಿಬ್ಬಂದಿ ಇದ್ದರು ಎಂದು ಎಆರ್‍ವೈ ನ್ಯೂಸ್ ವರದಿ ಮಾಡಿದೆ. ಘೋಟ್ವಾ ಮಾರುಕಟ್ಟೆ ಪ್ರದೇಶದಲ್ಲಿ ಸಿಂಧ್ ರೇಂಜರ್ಸ್ ವಾಹನವನ್ನು ಗುರಿಯಾಗಿ ಇಟ್ಟುಕೊಂಡು ಈ ಸ್ಫೋಟ ಮಾಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಮತ್ತು ಶವಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಈ ಸ್ಫೋಟದ ಜವಾಬ್ದಾರಿಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ.

Exit mobile version